ದಾವಣಗೆರೆ: ದಾವಣಗೆರೆ ತಾಲ್ಲೂಕು ಆನಗೋಡು ಹೋಬಳಿ ಮಲ್ಲಶೆಟ್ಟಿಹಳ್ಳಿ ಗ್ರಾಮ ಸ.ನಂ: 5,6,7,8,15,16 ಮತ್ತು 24ರ ನಕಾಶೆ ಕಂಡ ರಸ್ತೆಯಲ್ಲಿ ಬರುವ ಮರಗಳನ್ನು ತೆರವುಗೊಳಿಸಲು ರಾಜಸ್ವ ನಿರೀಕ್ಷಕರು, ಆನಗೋಡು ಹೋಬಳಿ, ದಾವಣಗೆರೆ ತಾಲ್ಲೂಕು ಇವರ ವತಿಯಿಂದ ಸೆ.14 ರಂದು ಬೆಳಿಗ್ಗೆ 11 ಗಂಟೆಗೆ ಈ ಮರಗಳನ್ನು ಸ್ಥಳದಲ್ಲೇ ಬಹಿರಂಗ ಹರಾಜು ಮಾಡಲಾಗುವುದು.
ಒಂದು ವೇಳೆ ಈ ದಿನಾಂಕದಂದು ಯಾರೂ ಭಾಗವಹಿಸದೇ ಇದ್ದಲ್ಲಿ ಅಥವಾ ಮಂಜೂರಾದ ತಗ್ಗು ಬೆಲೆಗಿಂತ ಕಡಿಮೆ ದರ ಬಂದಲ್ಲಿ ಮರು ಹರಾಜನ್ನು ನಡೆಸಲಾಗುವುದು. ಹೆಚ್ಚಿನ ವಿವರಗಳನ್ನು ತಹಸಿಲ್ದಾರರ ಕಚೇರಿಯಿಂದ ಪಡೆಯಬಹುದು ಎಂದು ದಾವಣಗೆರೆ ತಹಶೀಲ್ದಾರ್ ಬಿ.ಎನ್ ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



