Connect with us

Dvgsuddi Kannada | online news portal | Kannada news online

ದಾವಣಗೆರೆ: 60 ಸಾವಿರ ಆಸೆಗೆ ಮೊಮ್ಮಗನನ್ನೇ ಮಾರಾಟ ಮಾಡಿದ ಅಜ್ಜ; ಮಗು ಖರೀದಿಸಿದ ದಂಪತಿ ಸೇರಿ ನಾಲ್ವರ ವಶಕ್ಕೆ ಪಡೆದ ಪೊಲೀಸ್

ದಾವಣಗೆರೆ

ದಾವಣಗೆರೆ: 60 ಸಾವಿರ ಆಸೆಗೆ ಮೊಮ್ಮಗನನ್ನೇ ಮಾರಾಟ ಮಾಡಿದ ಅಜ್ಜ; ಮಗು ಖರೀದಿಸಿದ ದಂಪತಿ ಸೇರಿ ನಾಲ್ವರ ವಶಕ್ಕೆ ಪಡೆದ ಪೊಲೀಸ್

ದಾವಣಗೆರೆ: ಹಣದ ಆಸೆಗೆ ಅಜ್ಜನೊಬ್ಬ ತನ್ನ ಮೊಮ್ಮಗನನ್ನೇ ಮಾರಟ ಮಾಡಿದ ಘಟನೆ ನಡೆದಿದೆ. ಮಾರಾಟವಾಗಿದ್ದ ಮಗುವನ್ನು ದಾವಣಗೆರೆ ಮಹಿಳಾ ಠಾಣೆಯ ಪೊಲೀಸರು 24 ಗಂಟೆಯಲ್ಲಿ ಪತ್ತೆಹಚ್ಚಿ ತಾಯಿಗೆ ಒಪ್ಪಿಸಿದ್ದಾರೆ.

60 ಸಾವಿರಕ್ಕೆ ಮಗುವನ್ನು ದಾವಣಗೆರೆ ನಗರದ ನಾಗಮ್ಮಕೇಶವಮೂರ್ತಿ ಬಡಾವಣೆಯ ನಿವಾಸಿ ಬಸಪ್ಪ, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ನವಲೆ ಗ್ರಾಮದ ಹಾಲಪ್ಪ, ಬೀಮವ್ವ ಎಂಬ ದಂಪತಿಗೆ ಮಾರಾಟ ಮಾಡಿದ್ದನು. ಮಗುವಿನ ತಾತನೇ ಮಗುವನ್ನು ಮಾರಾಟ ಮಾಡಿದ್ದನು.

ಬಸಪ್ಪ ಮಗಳಾದ ಸುಜಾತಾಳ ಎರಡನೇ ಗಂಡು ಮಗುವನ್ನು ಮಾರಾಟ ಮಾಡಿದ್ದನು. ಇದೀಗ ಪ್ರಕರಣ ದಾಖಲಾಗಿ 24 ಗಂಟೆಯಲ್ಲಿ ಪೊಲೀಸರು ಮಗು ಪತ್ತೆ ಮಾಡಿದ್ದು, ಮಗುವಿನ ತಾತಾ, ಮಗು ಖರೀದಿಸಿದ ದಂಪತಿ ಹಾಗೂ ಮಧ್ಯವರ್ತಿ ಎಗ್ ರೈಸ್ ಪರಶುರಾಮನನ್ನ ಪೊಲೀಸರು ವಶಕ್ಕೆ ಪಡೆದ್ದಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಮ್ಮುಖದಲ್ಲಿ ಪೊಲೀಸರು ತಾಯಿಗೆ ಹಸ್ತಾಂತರ ಮಾಡಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top