Connect with us

Dvgsuddi Kannada | online news portal | Kannada news online

ದಾವಣಗೆರೆ: ಥ್ರೋ ಬಾಲ್ ನಲ್ಲಿ ಭಾರತಕ್ಕೆ ಚಿನ್ನ ಪದಕ ತಂದ ಜಿಲ್ಲೆಯ ಇಬ್ಬರು ಯುವತಿಯರು

ದಾವಣಗೆರೆ

ದಾವಣಗೆರೆ: ಥ್ರೋ ಬಾಲ್ ನಲ್ಲಿ ಭಾರತಕ್ಕೆ ಚಿನ್ನ ಪದಕ ತಂದ ಜಿಲ್ಲೆಯ ಇಬ್ಬರು ಯುವತಿಯರು

ದಾವಣಗೆರೆ: ಥ್ರೋಬಾಲ್ ಸ್ಪರ್ಧೆಯಲ್ಲಿ ಜಿಲ್ಲೆಯ ಇಬ್ಬರು ಯುವತಿಯರು ದೇಶಕ್ಕೆ ಚಿನ್ನದ ಪದಕ ತಂದು ಕೊಟ್ಟಿದ್ದಾರೆ. ಇತ್ತೀಚಿಗೆ ನೇಪಾಳದಲ್ಲಿ ನಡೆದ ಇಂಡೋ-ನೇಪಾಳ್ ಥ್ರೋಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕ ಗೆದ್ದಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಇಬ್ಬರು ಯುವತಿಯರು ಭಾರತ ತಂಡ ಪ್ರತಿನಿಧಿಸಿ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಒಬ್ಬರು ರೂಪಾ ಕೃಷ್ಣಪ್ಪ. ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದವರು. ತಂದೆ ಕೃಷ್ಣಪ್ಪ, ರೈತ. ನಾಲ್ಕು ಹೆಣ್ಣು ಹಾಗೂ ಓರ್ವ ಗಂಡು ಮಗ ಇರುವ ಕುಟುಂಬದಲ್ಲಿ ರೂಪಾ ಮೂರನೇ ಮಗಳು.

ಶಾಲೆಯಲ್ಲಿ ಥ್ರೋಬಾಲ್ ಉತ್ತಮವಾಗಿ ಆಡುತ್ತಿದ್ದ ರೂಪಾ, ಬಳಿಕ ರಾಜ್ಯ ತಂಡಕ್ಕೆ ಆಯ್ಕೆ ಆಗಿ ಪಂಜಾಬ್ ಹಾಗೂ ತಮಿಳುನಾಡಿನ ಥ್ರೋಬಾಲ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆದ್ದು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದರು. ಬಿಬಿಎಂ ಓದಿರುವ ರೂಪಾ ಪೊಲೀಸ್ ಅಧಿಕಾರಿ ಆಗುವ ಕನಸು ಕಂಡಿದ್ದಾರೆ.

ಇನ್ನೊಬ್ಬರು ಸುಜಾತಾ ಬಸವರಾಜಪ್ಪ. ಸುಜಾತಾ ತಂದೆ ಕೂಡಾ ರೈತ. ಚನ್ನಗಿರಿ ತಾಲೂಕಿನ ಕಗತೂರು ಗ್ರಾಮದ ನಿವಾಸಿ. ಎಂಎ ಬಿಇಡಿ ಓದಿ ಕೆಲ ವರ್ಷ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ.ನಿರಂತರ ಪರಿಶ್ರಮದಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿ ಪ್ರಶಸ್ತಿ ಗೆದ್ದ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top