ದಾವಣಗೆರೆ: ತೆಂಗು ಅಭಿವೃದ್ದಿ ಮಂಡಳಿಯವರು ತೆಂಗಿನ ಮರ ಹತ್ತುವವರು, ತೆಂಗಿನಕಾಯಿ ಕೀಳುವವರು, ನೀರಾ ತಂತ್ರಜ್ಞಾರನ್ನು ಉತ್ತೇಜಿಸಲು ಹಾಗೂ ಅವರ ಸುರಕ್ಷತೆ ಹಿತದೃಷ್ಠಿಯಿಂದ ಕೇರಾ ಸುರಕ್ಷಾ ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಅರ್ಹರು ಅರ್ಜಿ ಸಲ್ಲಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಕೇರಾ ಸುರಕ್ಷಾ ವಿಮಾ ಯೋಜನೆಯು ವೈಯಕ್ತಿಕ ಅಪಘಾತ ವಿಮಾ ಯೋಜನೆಯಾಗಿದ್ದು, ತೆಂಗು ಅಭಿವೃದ್ದಿ ಮಂಡಳಿಯವರು ಓರಿಯಂಟಲ್ ವಿಮಾ ಕಂಪನಿ ಲಿಮಿಟೆಡ್ ರವರ ಸಹಯೋಗದೊಂದಿಗೆ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ತೆಂಗಿನ ಮರ ಹತ್ತುವವರು, ತೆಂಗಿನ ಕಾಯಿ ಕೀಳುವವರು, ನೀರಾ ತಂತ್ರಜ್ಞನರು ಅಪಘಾತಕ್ಕೊಳಗಾಗಿ ಮರಣ ಹೊಂದಿದಲ್ಲಿ ಅಥವಾ ಅಂಗವಿಕಲರಾಗಿದ್ದಲ್ಲಿ ವಿಮಾ ಕಂಪನಿರವರಿಂದ ವಿಮಾ ಮೊತ್ತದ ಮುಖಾಂತರ ಆರ್ಥಿಕ ಸಹಾಯ ಒದಗಿಸಲಾಗುತ್ತದೆ. ಕೇರಾ ಸುರಕ್ಷಾ ವಿಮಾ ಯೋಜನೆಯ ಘಟಕವಾರು ವೆಚ್ಚ ವಿವರ ಇಂತಿದೆ. ಮರಣ/ಶಾಶ್ವತ ಅಂಗವಿಕಲತೆಗೆ ರೂ.5 ಲಕ್ಷ, ಭಾಗಶಃ ಶಾಶ್ವತ ಅಂಗವಿಕಲತೆಗೆ ರೂ.2.5 ಲಕ್ಷ, ಚಿಕಿತ್ಸೆ ವೆಚ್ಚಾ ರೂ.01 ಲಕ್ಷ, ಅಂಬುಲೆನ್ಸ್ ವೆಚ್ಚ ರೂ.3000. ತಾತ್ಕಾಲಿಕ ಅಂಗವಿಕಲತೆಗೆ ರೂ.18000 (ಪ್ರತಿ ವಾರಕ್ಕೆ ರೂ.3000 ರಂತೆ 6 ವಾರಗಳ ಕಾಲ). ರೋಗಿಯನ್ನು ಹಾಸ್ಪಿಟಲ್‍ನಲ್ಲಿ ತೋರಿಸಲು ವೆಚ್ಚ ರೂ.3000/- ( ಪ್ರತಿ ದಿನಕ್ಕೆ ರೂ.200 ರಂತೆ 15 ದಿನಗಳ ಕಾಲ). ಶವ ಸಂಸ್ಕಾರ ವೆಚ್ಚ ರೂ.5000 ಆರ್ಥಿಕ ನೆರವು ಒದಗಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯಡಿ ಒಬ್ಬರಿಗೆ ಒಟ್ಟು ರೂ.398.65 ಗಳ ವಾರ್ಷಿಕ ಕಂತನ್ನು ವಿಮಾ ಕಂಪನಿಯವರಿಗೆ ಪಾವತಿಸಬೇಕಾಗಿರುತ್ತದೆ. ಇದರಲ್ಲಿ ರೈತರ ವಂತಿಕೆ ವಾರ್ಷಿಕ ರೂ.99, ತೆಂಗು ಅಭಿವೃದ್ಧಿ ಮಂಡಳಿಯ ವಂತಿಕೆ ರೂ.299.65 ಗಳಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ ಕೇರಾ ಸುರಕ್ಷಾ ವಿಮಾ ಯೋಜನೆಯಡಿ 1060 ಸಂಖ್ಯೆಯ ಹಾಗೂ ದಾವಣಗೆರೆ ಜಿಲ್ಲೆಗೆ 100 ಸಂಖ್ಯೆಯ ಬೌತಿಕ ಗುರಿಯನ್ನು ತೆಂಗು ಅಭಿವೃದ್ದಿ ಮಂಡಳಿ ನಿಗಧಿಪಡಿಸಿದೆ. ಅದರಂತೆ ವಿಮಾ ಯೋಜನೆಗಾಗಿ ತೆಂಗಿನಮರ ಹತ್ತುವವರು, ತೆಂಗಿನ ಕಾಯಿ ಕೀಳುವವರು, ನೀರಾ ತಂತ್ರಜ್ಞಾನರಿಂದ ಅರ್ಜಿ ಆಹ್ವಾನಿಸಿದ್ದು, ನಿಗದಿತ ನಮೂನೆಯ ಭರ್ತಿ ಮಾಡಿದ ಅರ್ಜಿ, ವಾರ್ಷಿಕ ಕಂತು ರೂ.99.00 ಪಾವತಿಸಿದ ರಸೀದಿ ಹಾಗೂ ಇನ್ನಿತರ ಅವಶ್ಯಕ ದಾಖಲಾತಿಗಳನ್ನು ನೇರವಾಗಿ ನಿರ್ದೇಶಕರು ತೆಂಗು ಅಭಿವೃದ್ದಿ ಮಂಡಳಿ, ಪ್ರಾದೇಶಿಕ ಕಚೇರಿ ಬೆಂಗಳೂರು ಇವರಿಗೆ ಕಳುಹಿಸಿಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು. ದಾವಣಗೆರೆ ದೂ.ಸಂ:08192-292091, 9482129648. ಚನ್ನಗಿರಿ ದೂ.ಸಂ: 08189-228170, ಮೊ.ಸಂ: 9449759777, ಹೊನ್ನಾಳಿ ದೂ.ಸಂ: 08188-252990, ಮೊ.ಸಂ: 8296358345. ಹರಿಹರ ದೂ.ಸಂ: 08192-242803, ಮೊ.ಸಂ: 7625078054. ಜಗಳೂರು ದೂ.ಸಂ: 08196-227389 ಮೊ.ಸಂ: 9353175240 ಕ್ಕೆ ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



