Connect with us

Dvgsuddi Kannada | online news portal | Kannada news online

ದಾವಣಗೆರೆ: ಕುರಿಗಾಹಿ ಕುಟುಂಬಗಳಿಗೆ ಸುವರ್ಣಾವಕಾಶ; ಆಕಸ್ಮಿಕ ಮರಣ ಹೊಂದಿದ್ರೆ 5 ಲಕ್ಷದವರೆಗೆ ವಿಮಾ ಸೌಲಭ್ಯ

ದಾವಣಗೆರೆ

ದಾವಣಗೆರೆ: ಕುರಿಗಾಹಿ ಕುಟುಂಬಗಳಿಗೆ ಸುವರ್ಣಾವಕಾಶ; ಆಕಸ್ಮಿಕ ಮರಣ ಹೊಂದಿದ್ರೆ 5 ಲಕ್ಷದವರೆಗೆ ವಿಮಾ ಸೌಲಭ್ಯ

ದಾವಣಗೆರೆ: 2022-23ನೇ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಕುರಿ/ಮೇಕೆ ಸಾಕಾಣಿಕೆದಾರರು/ವಲಸೆ ಕುರಿಗಾರರು ಆಕಸ್ಮಿಕ ಮರಣ ಹೊಂದಿದಲ್ಲಿ ಅವಲಂಬಿತ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಕುರಿಗಾಹಿಗಳಿಗೆ 5 ಲಕ್ಷ ರೂ. ವಿಮಾ ಸೌಲಭ್ಯ ಪಡೆಯಯಬಹುದು.

ಫಲಾನುಭವಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಆಧಾರ ಕಾರ್ಡ್ ನಲ್ಲಿರುವ ಖಾಯಂ ವಿಳಾಸದ ವ್ಯಾಪ್ತಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಅದೇ ಜಿಲ್ಲೆಯಲ್ಲಿ ವಿಮೆ ಮಾಡಿಸಲಾಗುವುದು. ರೇಷನ್ ಕಾರ್ಡ್ ನಲ್ಲಿರುವ ಕುಟುಂಬದ ಸದಸ್ಯರ ಪಟ್ಟಿ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅರ್ಜಿದಾರರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿ. ಪಶುವೈದ್ಯಾಧಿಕಾರಿಗಳಿಂದ ಕನಿಷ್ಟ 30 ಕುರಿ / ಮೇಕೆಗಳು ಹೊಂದಿರುವ ಬಗ್ಗೆ ದೃಢೀಕೃತ ಪ್ರಮಾಣ ಪತ್ರ. ನಾಮ ನಿರ್ದೇಶಿತ ವಿವರಣಾ ಪ್ರಮಾಣ ಪತ್ರ. ಒದಗಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ದಾವಣಗೆರೆ ಡಾ: ಶಿವಕುಮಾರ್ ಜಿ.ಎಸ್. ದೂರವಾಣಿ ಸಂಖ್ಯೆ: 9353567572 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top