ದಾವಣಗೆರೆ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘ ಸಂಯುಕ್ತಾಶ್ರಯದಲ್ಲಿ ನಾಳೆ (ಏ.30) ವಿಶ್ವ ಪಶುವೈದ್ಯಕೀಯ ದಿನಾಚರಣೆ ಹಾಗೂ ರಾಷ್ಟ್ರೀಯ ಜಾನುವಾರು ಮಿಶನ್ ಕಾರ್ಯಕ್ರಮದಡಿ ಪಶುವೈದ್ಯರಿಗೆ ತಾಂತ್ರಿಕ ಸಂಕಿರಣ ಹಾಗೂ ರೇಬೀಸ್ ಲಸಿಕಾ ಸಪ್ತಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಬೆಳಿಗ್ಗೆ 10.30ಕ್ಕೆ ಪಶು ಆಸ್ಪತ್ರೆಯ ಆವರಣದ ಉಪ ನಿರ್ದೇಶಕರ ಕಚೇರಿಯ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಜಿ.ಪಂ ಉಪಕಾರ್ಯದರ್ಶಿ ಆನಂದ್.ಬಿ ಉದ್ಘಾಟಿಸುವರು. ಪಾಲಿಕೆಯ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ರೇಬೀಸ್ ಲಸಿಕಾ ಸಪ್ತಾಹದ ಉದ್ಘಾಟಿಸುವರು. ಉಪನಿರ್ದೇಶಕ ಡಾ.ಚಂದ್ರಶೇಖರ್ ಎಸ್ ಸುಂಕದ್ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಲ್ ನಾಗರಾಜ್, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಪಾಲಾಕ್ಷಿ, ಪಾಲಿಕಿನ್ಲಿಕ್‍ನ ಉಪನಿರ್ದೇಶಕ ಡಾ.ವೀರೇಶ್.ಟಿ.ಆರ್, ಸೂಕ್ಷ್ಮ ಜೀವಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್, ಪ್ರಾಣಿ ಕಲ್ಯಾಣಿ ಅಧಿಕಾರಿ ಡಾ.ರಾಮಪ್ರಸಾದ್ ಕುಲಕರ್ಣಿ, ಕರ್ನಾಟಕ ಪಶುವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ಎಸ್.ಬಿ ರವಿಕುಮಾರ್ ಪಾಲ್ಗೊಳ್ಳುವರು. ಹಾಗೂ ಏ.30 ರಿಂದ ಮೇ.06 ರವರೆಗೆ ಶ್ವಾನ ಹಾಗೂ ಬೆಕ್ಕುಗಳಿಗೆ ಉಚಿತ ರೇಬೀಸ್ ಲಸಿಕಾ ಸಪ್ತಾಹವನ್ನು ಪಾಲಿಕಿನ್ಲಿಕ್ ಆವರಣದಲ್ಲಿ ನಡೆಸಲಾಗುವುದೆಂದು ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆ ತಿಳಿಸಿದೆ.



