ದಾವಣಗೆರೆ: ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರೇಬೀಸ್ ರೋಗ ತಡೆಗಟ್ಟುವ ನಿಟ್ಟಿನಲ್ಲಿ ರೇಬೀಸ್ ಲಸಿಕೆಯನ್ನು ನಾಯಿ ಮತ್ತು ಬೆಕ್ಕುಗಳಿಗೆ ಏ.30 ರಿಂದ ಮೇ.06 ರವರೆಗೆ ಉಚಿತ ಲಸಿಕಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ.
ಸಪ್ತಾಹದಲ್ಲಿ ನಾಯಿ ಮತ್ತು ಬೆಕ್ಕುಗಳಿಗೆ ಪಾಲಿಕ್ಲಿನಿಕ್, (ಜಿಲ್ಲಾ ಪಶು ಆಸ್ಪತ್ರೆ ) ದಾವಣಗೆರೆ, ಆರುಣಾ ಟಾಕೀಸ್ ಎದುರು ಬೆಳಿಗ್ಗೆ 9.30 ರಿಂದ 1.00 ಗಂಟೆ ಮತ್ತು ಮಧ್ಯಾಹ್ನ- 2.00 ರಿಂದ 4.00 ಗಂಟೆಯ ವರೆಗೆ ಉಚಿತವಾಗಿ ರೇಬೀಸ್ ಲಸಿಕೆ ಹಾಕಲಾಗುತ್ತಿದೆ. ಸಾರ್ವಜನಿಕರು ಲಸಿಕಾ ಸಪ್ತಾಹದಲ್ಲಿ ತಮ್ಮ ನಾಯಿ ಬೆಕ್ಕುಗಳಿಗೆ ಲಸಿಕೆ ಹಾಕಿಸಿ ರೇಬೀಸ್ ತಡೆಗಟ್ಟಲು ಸಹಕರಿಸುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



