ದಾವಣಗೆರೆ: ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ಸಾರ್ವಜನಿಕರ ಹಿತದೃಷ್ಟಿಯಿಂದ ಒಂದು ಸಿಟಿ-ಒಂದು ನಂಬರ್ ಅಡಿಯಲ್ಲಿ ಯಾವುದೇ ಸರ್ಕಾರಿ ಕಚೇರಿಯೊಂದಿಗೆ ಸಂವಹನ ನಡೆಸಲು, ಅಗತ್ಯ ಮಾಹಿತಿ ಪಡೆಯಲು ಹಾಗೂ ದೂರುಗಳ ನೋಂದಣಿಗೆ ಏಕೀಕೃತ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ.
ಈ ಸಹಾಯವಾಣಿಯು ದಾವಣಗೆರೆ ನಗರದ ನಾಗರೀಕರು ಮತ್ತು ಇತರೆ ಇಲಾಖೆಗಳ ನಡುವೆ ಪರಿಣಾಮಕಾರಿ ದೂರವಾಣಿ ಸಂವಹನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. ಐ.ವಿ.ಆರ್.ಎಸ್ ಆಧಾರಿತ ಕಾಲ್ ಸೆಂಟರ್ ಹನ್ನೊಂದು ಅಂಕೆಯ ಅನನ್ಯ ಸಂಖ್ಯೆಯು (1800 4256 020) ನಾಗರೀಕರಿಗೆ, ಯಾವುದೇ ಸರ್ಕಾರಿ ಕಛೇರಿಯೊಂದಿಗೆ ಸಂವಹನ ನಡೆಸಲು ಹಾಗೂ ಅಗತ್ಯ ಮಾಹಿತಿ ಪಡೆಯಲು, ದೂರುಗಳ ನೋಂದಣಿ ಮತ್ತು ಟ್ರಾಕಿಂಗ್ ಮಾಡಲು ಸಹಾಯ ಮಾಡುತ್ತದೆ. ಜನರ ಕುಂದು ಕೊರತೆಗಳನ್ನು ಇಲಾಖೆಯೊಂದಿಗೆ ಸಂವಹನದ ಮೂಲಕ ಹಸ್ತಾಂತರಿಸುವ ಕಾರ್ಯನಿರ್ವಹಿಸುತ್ತದೆ.
ದಾವಣಗೆರೆ ನಗರದ ಕೇಂದ್ರೀಕೃತ ಕಾಲ್ ಸೆಂಟರ್ ಒಂದು ಸಿಟಿ-ಒಂದು ಸಂಖ್ಯೆ ಶೈಲಿಯಲ್ಲಿ ನಾಗರೀಕ ಸೇವೆಗಳನ್ನು ಒದಗಿಸುವ ಗುರಿ ಹೊಂದಿದ್ದು, ಈ ಸಹಾಯವಾಣಿ ನಿರ್ವಾಹಕರನ್ನು ದಾವಣಗೆರೆಯಲ್ಲಿನ ಉದ್ದೇಶಿತ ಕಮಾಂಡ್ ಕಂಟ್ರೋಲ್ ಸೌಲಭ್ಯದ ಅಡಿಯಲ್ಲಿ ನಿಯೋಜಿಸಲಾಗುವುದು, ಹಾಗೂ ನಾಗರೀಕರಿಗೆ ಇದನ್ನು ಒದಗಿಸುವ ಉದ್ದೇಶದಿಂದ ಮೊದಲ ಹಂತದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆವರೆಗೆ ಪ್ರಾಯೋಗಿಕ ಹಂತದ ಮುಖಾಂತರ ಪರಿಶೀಲಿಸಲಾಗುವುದು. ದಾವಣಗೆರೆ ನಗರದ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ: 1800 4256 020 ಸದುಪಯೋಗ ಪಡೆದುಕೊಳ್ಳಬಹುದಾಗಿದೆ.



