ದಾವಣಗೆರೆ: ಕೋವಿಡ್-19 ರ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾವುದೇ ವರ್ತಕರು ಸಾಂಧರ್ಭಿಕ ಲಾಭ ಪಡೆಯುವ ದುರುದ್ದೇಶದಿಂದ ತೂಕ – ಅಳತೆಗಳಲ್ಲಿ ಕಡಿಮೆ ವಿತರಣೆ ಮಾಡುವುದಾಗಲೀ (ನ್ಯಾಯಬೆಲೆ ಅಂಗಡಿಗಳು ಸೇರಿದಂತೆ) ಪೊಟ್ಟಣ ಸಾಮಾಗ್ರಿಗಳ ಮೇಲೆ ಮುದ್ರಿಸಿರುವ ಎಂಆರ್‍ಪಿ ಗಿಂತಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕ ಹೆಚ್.ಎಸ್.ರಾಜು ತಿಳಿಸಿದ್ದಾರೆ.
ಪೊಟ್ಟಣ ಸಾಮಗ್ರಿ ನಿಯಮ 26ರ ಸಾಮಾಗ್ರಿಗಳನ್ನು ಹೊರತು ಪಡಿಸಿ ಮಾರಿದಲ್ಲಿ ಲೀಗಲ್ ಮೆಟ್ರಾಲಜಿ ಕಾಯಿದೆ 2009 ಹಾಗೂ ಪೊಟ್ಟಣ ಸಾಮಾಗ್ರಿ ನಿಯಮಗಳು 2011 ರ ರೀತ್ಯಾ ತೀವ್ರಕ್ರಮ ಕೈಗೊಳ್ಳಲಾಗುವುದು ಹಾಗೂ ಅಂತಹ ಅಪರಾಧಿಗಳ ಟ್ರೇಡ್ ಲೈಸೆನ್ಸ್‍ನ್ನು ರದ್ದತಿಗೆ ಶಿಫಾರಸ್ಸು ಮಾಡಲಾಗುವುದೆಂದು ಎಂದು ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕ ಹೆಚ್.ಎಸ್.ರಾಜು ವರ್ತಕರಿಗೆ ಎಚ್ಚರಿಕೆ ನೀಡಿದ್ದಾರೆ.
ದೂರುಗಳಿಗಾಗಿ ಸಹಾಯಕ ನಿಯಂತ್ರಕ ಹೆಚ್.ಎಸ್.ರಾಜು ಮೊ.ಸಂಖ್ಯೆ 8050024760 ಹಾಗೂ ಉಪವಿಭಾಗದ ಮಟ್ಟದಲ್ಲಿ ದಾವಣಗೆರೆ-01ದಾವಣಗೆರೆ -2-ಗ್ರಾಮಂತರ, ಹರಿಹರ, ಹರಪನಹಳ್ಳಿ, ಪರ್ವೇಜ್ ನೀರಿಕ್ಷಕ ಚನ್ನಬಸಪ್ಪ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



