ದಾವಣಗೆರೆ: ಜಿಲ್ಲೆಯ ಹರಿಹರದ ಚಿತ್ರ ಕಲಾವಿದ ಜಯಕುಮಾರ್ ತನ್ನ ನಾಲಿಗೆ ಮೂಲಕವೇ ಅದ್ಬುತ ಚಿತ್ರ ಬಿಡಿಸಿದ್ದಾರೆ.
ಹರಿಹರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಹಿನ್ನೆಲೆ ಅಂಬೇಡ್ಕರ್ ಅವರ ಚಿತ್ರವನ್ನು ನಾಲಿಗೆ ಮೂಲಕವೇ ಅದ್ಬುತವಾಗಿ ಬಿಡಿಸಿದ್ದಾರೆ. ನಾಲಿಗೆಗೆ ಪ್ಲಾಸ್ಟರ್ ಹಾಕಿಕೊಂಡು 5 ಗಂಟೆ ಪರಿಶ್ರಮ ಫಲದಿಂದ ಈ ಅದ್ಭುತ ಚಿತ್ರ ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ವಿಭಿನ್ನ ಕಲೆಯ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಹರಿಹರ ನಗರದಲ್ಲಿ ಆರ್ಟ್ ಹಾಗೂ ಟ್ಯಾಟೋ ಅಂಗಡಿ ಇಟ್ಟುಕೊಂಡಿರುವ ಜಯ ಕುಮಾರ್ ಇಂತಹ ವಿಭಿನ್ನ ಚಿತ್ರ ರಚನೆಯಿಂದ ಖ್ಯಾತಿ ಗಳಿಸಿದ್ಧಾರೆ. ಫೇಮಸ್ ಆಗಿದ್ದಾರೆ. ಬ್ಲಾಕ್ ಶೀಟ್ನಲ್ಲಿ ಬಿಳಿ ಬಣ್ಣದಲ್ಲಿ ಈ ಚಿತ್ರ ಮೂಡಿಬಂದಿದೆ. 5 ಅಡಿ ಅಗಲ ಹಾಗೂ 6 ಅಡಿ ಉದ್ದದ ಕಪ್ಪು ಬಿಳುಪು ಚಿತ್ರ ಬಿಸಿದ್ದಾರೆ. ಈಗಾಗಲೇ ಕನ್ನಡ ಸೆಲೆಬ್ರಿಟಿಗಳ ಚಿತ್ರಗಳನ್ನು ಸಹ ಬಿಡಿಸಿ ಗಮನ ಸೆಳೆದಿದ್ದಾರೆ.



