ದಾವಣಗೆರೆ: ಜಿಲ್ಲಾ ಚೆಸ್ ಕ್ಲಬ್ ವತಿಯಿಂದ ನಗರದಲ್ಲಿ ಬೇಸಿಗೆ ಚೆಸ್ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಮಕ್ಕಳು ಎಲ್ಲಾ ರೀತಿಯ ದೈಹಿಕ ಕ್ರೀಡೆಗಳಾದ ಕ್ರಿಕೆಟ್, ಕಬಡ್ಡಿ, ಕೊಕ್ಕೊ ಆಡುತ್ತಾರೆ. ಆದರೆ ಅವರ ಬುದ್ದಿಶಕ್ತಿ ಮತ್ತು ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವ ಚದುರಂಗ (ಚೆಸ್) ಆಟವನ್ನು ಮಕ್ಕಳು ಕಲಿಯಬೇಕು ಎಂದು ಸಂಘದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ತಿಳಿಸಿದ್ದಾರೆ.
ಬೇಸಿಗೆ ಚೆಸ್ ತರಬೇತಿ ಶಿಬಿರವು ಬೇಸಿಕ್ ಮತ್ತು ಇಂಟರ್ ಮೀಡಿಯಟ್ ಎರಡು ಹಂತದಲ್ಲಿ ನಡೆಯಲಿದೆ ಬೇಸಿಕ್ ಹಂತದಲ್ಲಿ ಇರುವ ಮಕ್ಕಳಿಗೆ ಬೆಳಿಗ್ಗೆ 9-00 ರಿಂದ 10-30 ಗಂಟೆಯವರೆಗೆ ಇಂಟರ್ ಮೀಡಿಯೆಟ್ ಹಂತದವರೆಗೆ 11-00 ಗಂಟೆಯಿಂದ 12-30 ವರೆಗೆ 2ಹಂತದಲ್ಲಿ ಮಕ್ಕಳಿಗೆ ತರಬೇತಿ ಶಿಬಿರವು ದಿನಾಂಕ:16-04-2022 ರಿಂದ 30-4-2022 ರವರೆಗೆ ಮತ್ತು ಎರಡನೇ ಶಿಬಿರವು 01-05-2022 ರಿಂದ 14-05-2022 ರವರೆಗೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಡಾ. ಶಾಮನೂರು ಶಿವಶಂಕ್ರಪ್ಪ ಭವನದಲ್ಲಿ ಏರ್ಪಡಿಸಲಾಗಿದೆ. ಹೆಸರನ್ನು ನೊಂದಾಯಿಸುವ ಪೋಷಕರು ಮಕ್ಕಳ ಆಧಾರ್ ಕಾರ್ಡ್ ಮತ್ತು ಫೋಟೋದೊಂದಿಗೆ ಸಂಪರ್ಕಿಸಲು, ಮಕ್ಕಳ ಹೆಸರನ್ನು ನೋಂದಾಯಿಸಲು ಸಂಘದ ಕಾರ್ಯದರ್ಶಿಗಳಾದ ಯುವರಾಜ್ 9945613469, ಮಂಜುಳಾ 7259310197 ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.
ದಿನಾಂಕ 15-05-2022 ರ ಭಾನುವಾರದಂದು ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಹದಿನಾರು ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಭಾಗವಹಿಸಬಹುದು. ಈ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಮೊದಲ ಇಪ್ಪತ್ತು ಸ್ಥಾನಗಳವರೆಗೆ ಟ್ರೋಫಿ ಮತ್ತು ನಗದು ಬಹುಮಾನವನ್ನು ವಿತರಿಸಲಾಗುವುದು.



