ದಾವಣಗೆರೆ: ಬಾತಿ ಕೆರೆ ಅಭಿವೃದ್ಧಿಗೆ ಸರ್ಕಾರ 12 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ ಹೇಳಿದರು.
ಧೂಡಾ ನೂತನ ಅಧ್ಯಕ್ಷ ಕೆ.ಎಂ ಸುರೇಶ್ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಬಾತಿ ಕೆರೆ ಅಭಿವೃದ್ಧಿಗೆ ಹಿಂದಿನ ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಸರ್ಕಾರ 12 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದರು.
ನೂತನ ಅಧ್ಯಕ್ಷರು ಬಾತಿ ಕೆರೆ ಅಭಿದ್ಧಿಗೆ ಅದ್ಯತೆ ನೀಡಬೇಕು. ಕೆರೆಯನ್ನು ಸುಂದರ ತಾಣವಾಗಿ ಅಭಿವೃದ್ಧಿಪಡಿಸಬೇಕು. ಈ ಬಗ್ಗೆ ಕೆ.ಎಂ ಸುರೇಶ್ ಕಾರ್ಯಪ್ರವೃತ್ತರಾಗಬೇಕು. ಧೂಡಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸುಮಾರು 30 ರಿಂದ 40 ಕೋಟಿಯಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎಂದರು.



