Connect with us

Dvgsuddi Kannada | online news portal | Kannada news online

ದಾವಣಗೆರೆ; 57 ಕೆರೆಗೆ ನೀರು ತುಂಬಿಸುವ ಯೋಜನೆಗೆ ಅಡಚಣೆ; ಕಕ್ಕರಗೊಳ್ಳದ ಮಂಜುನಾಥ್ ಗೆ ರೈತರ ಗೂಸಾ..!

ದಾವಣಗೆರೆ

ದಾವಣಗೆರೆ; 57 ಕೆರೆಗೆ ನೀರು ತುಂಬಿಸುವ ಯೋಜನೆಗೆ ಅಡಚಣೆ; ಕಕ್ಕರಗೊಳ್ಳದ ಮಂಜುನಾಥ್ ಗೆ ರೈತರ ಗೂಸಾ..!

ದಾವಣಗೆರೆ: ಜಿಲ್ಲೆಯ ಬರದ ತಾಲ್ಲೂಕು ಜಗಳೂರಿನ 57 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ 640 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಅಡಚಣೆ ಉಂಟು ಮಾಡಲು ಯತ್ನಿಸಿದ ಕಕ್ಕರಗೊಳ್ಳದ ಮಂಜುನಾಥ್ ಎಂಬನನ್ನು ರೈತರು ಹಿಡಿದು ಗೂಸಾ ಕೊಟ್ಟಿದ್ದಾರೆ.

ಏಪ್ರಿಲ್​ ಮಹತ್ವಾಕಾಂಕ್ಷೆಯ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಕಾಮಗಾರಿ ಭರದಿಂದ ನಡೆಯುತ್ತಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕುರೆಮಾಕುಂಟೆ ಗ್ರಾಮದ ಬಳಿ ಕಕ್ಕರಗೊಳ್ಳದ ಮಂಜುನಾಥ್ ಅಡಚಣೆ ಉಂಟು ಮಾಡುವ ಉದ್ದೇಶದಿಂದ ಪೈಪ್ ಲೈನ್ ಏರ್ ವಾಲ್​ ಓಪನ್ ಮಾಡುತ್ತಿದ್ದ ಎಂಬ ಆರೋಪದ‌ ಮೇಲೆ ರೈತರು ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಂಜುನಾಥ್ ಉದ್ದೇಶ ಪೂರ್ವಕವಾಗಿ ವಾಲ್ ಓಪನ್ ಮಾಡಿ ನೀರು ಮುಂದೆ ಹೋಗದಂತೆ ತಡೆಯುತ್ತಿದ್ದ. ಮಂಜುನಾಥ್ ಕಕ್ಕರಗೊಳ್ಳದ ತಮ್ಮ ಜಮೀನಿನ ವಿಚಾರವಾಗಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇವರ ಮನವಿಯನ್ನು ಕೋರ್ಟ್​ ತಿರಸ್ಕರಿಸಿದೆ. ಹೀಗಾಗಿ ಯೋಜನೆ ಬಗ್ಗೆ ಜನರಲ್ಲಿ ಕೆಟ್ಟ ಭಾವನೆ ಬರಲು ಈ ರೀತಿ ಮಾಡುತ್ತಿದ್ದಾನೆ ಎಂಬುದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಆರೋಪಗಳನ್ನು ತಳ್ಳಿ ಹಾಕಿರುವ ಮಂಜುನಾಥ್ , ನಮ್ಮ ಜಮೀನಿನಲ್ಲಿ ಪೈಪ್ ಲೈನ್ ಹಾಕಿದ್ದಾರೆ. ಈ ಯೋಜನೆಯಿಂದ ನಮ್ಮ ಜಮೀನು ಹಾಳಾಗಿದೆ. ಜಮೀನಿಗೆ ಪರಿಹಾರ ನೀಡಿಲ್ಲ. ಈ ವಿಚಾರದ ಬಗ್ಗೆ ಮಾತನಾಡಲು ರೈತರನ್ನು ಒಂದೆಡೆ ಸೇರಿಸಲು ಹೋಗಿದ್ದೆ. ಆದ್ರೆ ಅಧಿಕಾರಿಗಳು ನನ್ನ ವಿರುದ್ಧ ಕೆಲ ರೈತರನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ. ಈ ಯೋಜನೆ ವಿರುದ್ಧ ನನ್ನ ಹೋರಾಟ ನಾನು ನಿಲ್ಲಿಲ್ಲ ಎಂದಿದ್ದಾನೆ.

ಬಹುತೇಕ ಕಡೆ ಏರ್ ವಾಲ್ ಓಪನ್ ಮಾಡಿ ನೀರು ಸೋರಿಕೆ ಆಗುವಂತೆ ಮಾಡುವುದು. ಅದನ್ನು ವಿಡಿಯೋ ಮಾಡಿ ಮಾಧ್ಯಮಗಳಿಗೆ ನೀಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top