ದಾವಣಗೆರೆ; ಸಹೋರರ ಕಲಹಕ್ಕೆ 20 ವರ್ಷದ ಬೆಳೆದು ನಿಂತ ಅಡಿಕೆ ತೋಟ ನಾಶವಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ. ವೆಂಕಟೇಶ್ ಎನ್ನುವ ರೈತನಿಗೆ ಸೇರಿದ 15 ಗುಂಟೆಯಲ್ಲಿದ್ದ 20 ವರ್ಷದ ಅಡಿಕೆ ಮರಗಳನ್ನು ರಾತ್ರೋರಾತ್ರಿ ಜೆಸಿಬಿ ಮೂಲಕ ಕಿತ್ತು ಹಾಕಲಾಗಿದೆ.
ರೈತರಾದ ವೆಂಕಟೇಶಪ್ಪ, ವೀರೇಶಪ್ಪ ಹಾಗೂ ಹನುಮಂತಪ್ಪ ಮೂವರು ಸಹೋದರರು. ಈ ಸಹೋದರರ ಪೈಕಿ ವೆಂಕಟೇಶ್ ಅವರ ಪಾಲಿನ ಅಡಿಕೆ ಮರಗಳು ಉತ್ತಮ ಫಸಲು ಬಿಟ್ಟಿದ್ದವು. ಹೀಗಾಗಿ ತೋಟ ಬಿಟ್ಟುಕೊಡುವಂತೆ ಸಹೋದರರಾದ ವೀರೇಶ್ ಹಾಗೂ ಹನುಮಂತಪ್ಪ ಇಬ್ಬರು ವೆಂಕಟೇಶ್ಗೆ ಒತ್ತಾಯಿಸಿದ್ದರು. ತೋಟ ಬಿಡಲು ಒಪ್ಪದ ಹಿನ್ನೆಲೆ ಅಡಿಕೆ ಮರಗಳನ್ನು ಕಿತ್ತು ಹಾಕಿದ್ದಾರೆ.
ಘಟನೆ ಸಂಬಂಧ ವೆಂಕಟೇಶ್ ತನ್ನ ಸಹೋದರಿಬ್ಬರ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚನ್ನಗಿರಿ ಠಾಣೆಯ ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ. ಸಹೋದರಿಬ್ಬರು ತಲೆ ಮರೆಸಿಕೊಂಡಿದ್ದಾರೆ.



