ದಾವಣಗೆರೆ: ನೈರುತ್ಯ ರೈಲ್ವೆ ವಲಯದಿಂದ ಏ. 4ರಿಂದ ಹೊಸಪೇಟೆ-ದಾವಣಗೆರೆ-ಹರಿಹರ (ಗಾಡಿ ಸಂಖ್ಯೆ: 07395) ರೈಲಿನ ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ.
ಪ್ರತಿದಿನ ಬೆಳಿಗ್ಗೆ 9.40ಕ್ಕೆ ಹೊಸಪೇಟೆಯಿಂದ ನಿರ್ಗಮಿಸಿ ಹಗರಿಬೊಮ್ಮನಹಳ್ಳಿ, ಕೊಟ್ಟೂರು ಮಾರ್ಗವಾಗಿ ಮಧ್ಯಾಹ್ನ 1.30ಕ್ಕೆ ದಾವಣಗೆರೆ ತಲುಪಲಿದೆ. ಅಲ್ಲಿಂದ ಹರಿಹರಕ್ಕೆ ತೆರಳಿ ಮಧ್ಯಾಹ್ನ 3ಕ್ಕೆ (ಗಾಡಿ ಸಂಖ್ಯೆ 07396) ಬಂದ ಮಾರ್ಗದಲದಲಿಯೇ ರಾತ್ರಿ 8ಕ್ಕೆ ಹೊಸಪೇಟೆಗೆ ತಲುಪಲಿದೆ.
ಇದರ ಜೊತೆಗೆ ಹೊಸಪೇಟೆ-ಬಳ್ಳಾರಿ (ಗಾಡಿ ಸಂಖ್ಯೆ: 07397) ರೈಲು ಸಹ ಪರೀಕ್ಷಾರ್ಥ ಪ್ರತಿದಿನ ಬೆಳಿಗ್ಗೆ 6ಕ್ಕೆ ಹೊಸಪೇಟೆಯಿಂದ ನಿರ್ಮಿಸಿ 7.40ಕ್ಕೆ ಬಳ್ಳಾರಿ ತಲುಪಲಿದೆ. ಬಳ್ಳಾರಿಯಿಂದ (ಗಾಡಿ ಸಂಖ್ಯೆ: 07398) 7.50ಕ್ಕೆ ಬಿಟ್ಟು 9.30ಕ್ಕೆ ಹೊಸಪೇಟೆ ಸೇರಲಿದೆ.



