ದಾವಣಗೆರೆ: ದಾವಣಗೆರೆಯ ಆಫೀಸರ್ಸ್ ಕ್ಲಬ್‍ನ ಆವರಣದಲ್ಲಿರುವ ಈಜುಕೊಳವನ್ನು ಮಾ.20 ರಿಂದ ಪ್ರಾರಂಭಿಸಲಾಗಿದ್ದು, ಸಾರ್ವಜನಿಕರಿಗೆ ಈಜು ತರಬೇತಿ ದರ 25 ದಿನಗಳಿಗೆ 3000 ರೂ., ಈಜು ಬರುವವರಿಗೆ ಗಂಟೆಗೆ 60 ರೂ., ತಿಂಗಳಿಗೆ 1000 ರೂ., ಹಾಗೂ ಕ್ಲಬ್‍ನ ಸದಸ್ಯರಿಗೆ ತರಬೇತಿ ದರ 25 ದಿನಗಳಿಗೆ 2500 ರೂ., ಈಜು ಬರುವವರಿಗೆ ಗಂಟೆಗೆ 50 ರೂ., ತಿಂಗಳಿಗೆ 800 ರೂ. ನಿಗದಿಗೊಳಿಸಲಾಗಿದೆ.
ಈಜುಕೊಳದ ಸದುಪಯೋಗವನ್ನು ಕ್ಲಬ್‍ನ ಸದಸ್ಯರು ಮತ್ತು ಸದಸ್ಯರ ಕುಟುಂಬ ವರ್ಗದವರು ಹಾಗೂ ಸಾರ್ವಜನಿಕರು ಉಪಯೋಗಿಸಬಹುದು ಎಂದು ದಾವಣಗೆರೆಯ ಆಫೀಸರ್ಸ್ ಕ್ಲಬ್ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತಿಳಿಸಿದ್ದಾರೆ.



