Connect with us

Dvgsuddi Kannada | online news portal | Kannada news online

ದಾವಣಗೆರೆ: ಪರೀಕ್ಷಾರ್ಥ ವಿದ್ಯುತ್ ಪ್ರಸರಣ;  ಸಾರ್ವಜನಿಕರಿಗೆ ಎಚ್ಚರಿಕೆ

ದಾವಣಗೆರೆ

ದಾವಣಗೆರೆ: ಪರೀಕ್ಷಾರ್ಥ ವಿದ್ಯುತ್ ಪ್ರಸರಣ;  ಸಾರ್ವಜನಿಕರಿಗೆ ಎಚ್ಚರಿಕೆ

ದಾವಣಗೆರೆ:  ಜಿಲ್ಲೆಯ ಜಗಳೂರು ತಾಲ್ಲೂಕಿನ 400/220ಕೆವಿ ಹಿರೇಮಲ್ಲನಹೊಳೆ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಚಿತ್ರದುರ್ಗ ಜಿಲ್ಲೆ 220ಕೆವಿ ಸ್ವೀಕರಣಾ ಕೇಂದ್ರ ಚಿತ್ರದುರ್ಗದವರೆಗೆ 220ಕೆವಿ 35.645. ಕಿ.ಮೀ.ಗಳಷ್ಟು ಉದ್ದದ 220ಕೆವಿ ವಿದ್ಯುತ್ ಪ್ರಸರಣ ಮಾರ್ಗವನ್ನು ಪರೀಕ್ಷಾರ್ಥವಾಗಿ ಚೇತನಗೊಳಿಸುತ್ತಿರುವುದರಿಂದ, 220ಕೆವಿ ವಿದ್ಯುತ್ ಪ್ರಸರಣ ಮಾರ್ಗದ ವಿದ್ಯುತ್ ಗೋಪುರಗಳನ್ನು ಸಾರ್ವಜನಿಕರು ಮುಟ್ಟುವುದಾಗಲಿ, ಹತ್ತುವುದಾಗಲಿ, ಮರದ ರಂಬೆ/ಲೋಹದ ತಂತಿಗಳನ್ನು ಮತ್ತು ಇತರೆ ಯಾವುದೇ ವಸ್ತುಗಳನ್ನು ವಿದ್ಯುತ್ ಮಾರ್ಗದ ಮೇಲೆ ಎಸೆಯುವುದಾಗಲಿ ಮತ್ತು ವಿದ್ಯುತ್ ಗೋಪುರಗಳಿಗೆ ಜಾನುವಾರುಗಳನ್ನು ಕಟ್ಟುವುದಾಗಲಿ ಮಾಡಬಾರದೆಂದು ಈ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ವಿದ್ಯುತ್ ಮಾರ್ಗ ಹಾದುಹೋಗಿರುವ ಪ್ರದೇಶಗಳಾದ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಹಿರೇಮಲ್ಲನಹೊಳೆ, ದೊಣ್ಣೆಹಳ್ಳಿ, ಮೂಡಲಮಾಚಿಕೆರೆ, ಸಿದ್ದಿಹಳ್ಳಿ, ಮುನ್ನೂರು ಸುತ್ತಮುತ್ತಿಲಿನ ಗ್ರಾಮಗಳು ಹಾಗೂ ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ ತಾಲ್ಲೂಕಿನ ಕಡಬನಕಟ್ಟೆ, ತುರುವನೂರು, ಕೂನಬೇವು, ಬೆಳಗಟ್ಟ, ಬಾಗೇನಾಳ್, ಕಲ್ಲೇನಹಳ್ಳಿ, ಗೋನೂರು ಮತ್ತು ಮದಕರಿಪುರ ಸುತ್ತಮುತ್ತಿಲಿನ ಗ್ರಾಮಗಳಲ್ಲಿ ಎಚ್ಚರಿಕೆಯನ್ನು ಉಲ್ಲಂಘಿಸಿ ಮೇಲೆ ತಿಳಿಸಿದ ವಿದ್ಯುತ್ ಮಾರ್ಗದಿಂದ ಸಾರ್ವಜನಿಕರಿಗೆ ಆಗುವ ಹಾನಿ, ತೊಂದರೆ, ಅಪಘಾತಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಜವಾಬ್ದಾರಿಯಾಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top