ದಾವಣಗೆರೆ: ನಿವೃತ್ತ ರಾಜ್ಯ ಸರ್ಕಾರಿ ನೌಕರರ ಪಿಂಚಣಿ ಅದಾಲತ್ ಮಾ.24 ರಂದು ಬೆಳಗ್ಗೆ 11 ರಿಂದ ಮ.1.30 ವರಗೆ ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಏರ್ಪಡಿಸಲಾಗಿದೆ.
ಈ ಕುರಿತು ಕುಂದು-ಕೊರತೆಗಳೇನಾದರೂ ಇದ್ದಲ್ಲಿ ನಿವೃತ್ತ ರಾಜ್ಯ ಸರ್ಕಾರಿ ನೌಕರರು ತಮ್ಮ ಅಹವಾಲನ್ನು ಮಾ.21 ರೊಳಗೆ ಜಿಲ್ಲೆಯ ಸಹಾಯಕ ನಿರ್ದೇಶಕರು, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆ ಕೂಠಡಿ ಸಂಖ್ಯೆ 43, ಜಿಲ್ಲಾಡಳತ ಭವನ, ದಾವಣಗೆರೆ, ಇವರಿಗೆ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಲು ಹಾಗೂ ಅದಾಲತ್‍ನಲ್ಲಿ ಭಾಗವಹಿಸಲು ತಿಳಿಸಿದೆ ಎಂದು ಸಹಾಯಕ ನಿರ್ದೇಶಕರು ಪಿಂಚಣಿ, ಸಣ್ಣ ಉಳಿತಾಯ ಮತ್ತು ಅಸ್ತಿ ಋಣ ನಿರ್ವಹಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



