ದಾವಣಗೆರೆ: ಕರ್ನಾಟಕ ಸಂಘಗಳ ನಿಯಮ ಪ್ರಕಾರ ನೋಂದಣಿಗೊಂಡು 5 ವರ್ಷಗಳಿಗೂ ಮೇಲ್ಪಟ್ಟು ನವೀಕರಣಗೊಳ್ಳದಿರುವ ಅಥವಾ ಲೆಕ್ಕಪತ್ರಗಳನ್ನು ದಾಖಲಿಸದೆ ಇರುವ ಸಂಘ ಸಂಸ್ಥೆಗಳಿಗೆ ನವೀಕರಣಕ್ಕಾಗಿ ಕೊನೆಯ ಅವಕಾಶ ನೀಡಲಾಗಿದೆ.
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿನ ಸಂಘ ಸಂಸ್ಥೆಗಳು ಪ್ರತಿ ವರ್ಷಕ್ಕೆ ಹೆಚ್ಚುವರಿ ರೂ 2000/- ರಂತೆ ದಂಡ ಪಾವತಿಸಿ ಮತ್ತು ಅವಶ್ಯ ದಾಖಲೆಗಳನ್ನು ಸಲ್ಲಿಸಿ ಡಿ.31 ರ ಒಳಗೆ ನವೀಕರಣ ಮಾಡಿಸಿಕೊಳ್ಳಬೇಕು. ಎಂದು ದಾವಣಗೆರೆ ಜಿಲ್ಲಾ ಸಂಘಗಳ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ಬಿ.ಜಯಪ್ರಕಾಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



