ದಾವಣಗೆರೆ: ರಾಜ್ಯದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ಸಂಖ್ಯೆ ಕಡಿಮೆ ಇದ್ದು, ಪರೀಕ್ಷೆಗೆ ಕಳುಹಿಸಿದ ಸ್ಯಾಂಪಲ್ ವರದಿ ತಡವಾಗುತ್ತಿದೆ. ಹೀಗಾಗಿ ಶೀಘ್ರ ವರದಿ ಬರುವಂತಾಗಲು ಜಿಲ್ಲೆಗೊಂದು ವಿಧಿ ವಿಜ್ಞಾನ ಪ್ರಯೋಗಾಲಯ ಆರಂಭಿಸಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಹೇಳಿದರು.
ಎಸ್ ಪಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ್ರು. ಸ್ಯಾಂಪಲ್‌ಗಳ ಫಲಿತಾಂಶ ಒಮ್ಮೊಮ್ಮೆ ಎರಡು ವರ್ಷ ಆಗುತ್ತಿದೆ. ಹೀಗಾಗಿ ಗರಿಷ್ಠ ಮೂರು ತಿಂಗಳ ಒಳಗೆ ಬರುವಂತೆ ಜಿಲ್ಲೆಗೊಂದು ಪ್ರಯೋಗಾಲಯ ಆಗಬೇಕಿದೆ.
ಮರಳು ಅಕ್ರಮ ಸಾಗಣೆ, ಕ್ವಾರಿಗಳ ಮೇಲೆ ನಿಗಾ ವಹಿಸಲು ನಿರ್ದೇಶನ ನೀಡಲಾಗಿದೆ. ಡ್ರಗ್ಸ್ ವಿಚಾರದಲ್ಲಿ ರಾಜ್ಯ ಪೊಲೀಸ್ ಕಾರ್ಯ ಶ್ಲಾಘಿಸಿದ್ರು.
ಈ ಸಭೆಯಲ್ಲಿ ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ಶ್ರೀ ರಾಜೀವ್ ಎಂ. ಹಾಗೂ ಜಿಲ್ಲೆಯ ಡಿವೈಎಸ್ಪಿಗಳು, ಪೊಲೀಸ್ ನಿರೀಕ್ಷಕರುಗಳು ಉಪಸ್ಥಿತರಿದ್ದರು. ಸಭೆಯ ನಂತರ ಡಿಎಆರ್ ಪೊಲೀಸ್ ಕ್ವಾಟ್ರಾಸ್ ಗೆ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಗೆ ಭೇಟಿ ನೀಡಿದರು.



