ದಾವಣಗೆರೆ: ಚಿರಂತನ ಸಂಸ್ಥೆ ಈ ಬಾರಿಯ ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸುತ್ತಿದೆ. ಮಹಿಳಾ ಕಲಾವಿದರನ್ನು ಹಾಗೂ ಮಹಿಳಾ ಸಾಧಕಿಯರನ್ನು ಪ್ರೋತ್ಸಾಹಿಸುವ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಚಿತ್ರಕಲಾ ನೈಪುಣ್ಯದಿಂದ ಅನೇಕ ಸಾಧನೆಗಳನ್ನು ಮಾಡಿರುವ ಮಹಿಳೆಯರು ಇದ್ದಾರೆ. ಅಂತಹ ಮಹಿಳೆಯರಿಗೆ ಮಾರ್ಚ್ 10 ರಿಂದ 13ರವರೆಗೆ ನಗರದ DRR ಪಾಲಿಟೆಕ್ನಿಕ್ ಕಾಲೇಜು ಕಾಂಪೌಂಡ್ ಗೋಡೆ ಅವರ ಕ್ಯಾನ್ವಾಸ್ ಆಗುವ ಅವಕಾಶವನ್ನು ಕಾಲೇಜಿನ ಸಹಾಯದೊಂದಿಗೆ “ಚಿರಂತನ” ಸಂಸ್ಥೆ ಆಯೋಜಿಸಿದೆ. “ಮಹಿಳಾ ಸಬಲೀಕರಣ” ಹಾಗೂ “ಆದರ್ಶ ಮಹಿಳೆಯರು” ಎಂಬ ಕಲ್ಪನೆಯಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಬಹುದು.
ಆಸಕ್ತ ಮಹಿಳಾ ಕಲಾವಿದರು ತೋರಬಹುದು. ಡೆಂಟಲ್ ಕಾಲೇಜ್ ರೋಡಿನಿಂದ ವಿದ್ಯಾ ನಗರಕ್ಕೆ ಹೋಗುವ ತಿರುವಿನಲ್ಲಿರುವ ಈ ಕಾಂಪೌಂಡ್ ಗೋಡೆಗಳಲ್ಲಿ ತಮ್ಮ ಕಲ್ಪನೆಯ ಚಿತ್ರಗಳನ್ನು ಕೊಟ್ಟಿರುವ ಥೀಮಿನಲ್ಲಿ ಬಿಡಿಸಬಹುದು. ಇದಕ್ಕೆ ಬೇಕಾದ ಪೇಂಟ್, ಬ್ರಷ್ ಗಳು ಮುಂತಾದವನ್ನು “ಚಿರಂತನ” ಸಂಸ್ಥೆ ಒದಗಿಸಲಿದೆ. ಮಹಿಳಾ ಕಲಾವಿದರಿಗೆ ತಮಗೆ ನೀಡಿರುವ ಗೋಡೆಯ ಮೇಲೆ ತಮ್ಮ ಪೇಂಟಿಂಗ್ ಅನ್ನು ಪೂರೈಸಲು 3 ದಿನಗಳ ಕಾಲಾವಕಾಶವಿದ್ದು, ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳ ಬಯಸುವ ಮಹಿಳೆಯರು ಚಿರಂತನ ಸಂಸ್ಥೆಯನ್ನು 9380321534 ಅಥವಾ 9535656163 ಯಲ್ಲಿ ಸಂಪರ್ಕಿಸಬಹುದು.
ಅತ್ಯುತ್ತಮವಾಗಿ ಪೈಂಟ್ ಮಾಡಿದ ಕಲಾವಿದೆಯರಿಗೆ ಪುರಸ್ಕಾರವು ಇದೆ. ಒಂದು ಅರ್ಥಪೂರ್ಣವಾದ “ಮಹಿಳಾ ದಿನಾಚರಣೆ”ಯ ಜೊತೆ ನಗರದ ಸೌಂದರ್ಯವು ವೃದ್ಧಿಸಲು ಇದೊಂದು ಉತ್ತಮ ಅವಕಾಶ. ಹಾಗೆ ಮಾರ್ಚ್ 14 ರಂದು ಸಂಜೆ ಶಿವಯೋಗಿ ಮಂದಿರದ ಆವರಣದಲ್ಲಿ “ಮಹಿಳಾ ದಿನಾಚರಣೆ” ಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, “ಕರ್ನಾಟಕ ಶ್ರೇಷ್ಠ” ಮಹಿಳಾ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ವೈದ್ಯಕೀಯ, ಶಿಕ್ಷಣ, ಕಾನೂನು, ಕ್ರೀಡೆ, ಚಿತ್ರಕಲೆ, ಸ್ವಯಂ ಉದ್ಯೋಗ, ನೃತ್ಯ, ಸಂಗೀತ, ಸಮಾಜಸೇವೆ, ಜನಪದ ಕಲೆಗಳು ಹೀಗೆ ಯಾವುದೇ ಕ್ಷೇತ್ರದಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಮಹಿಳೆಯರು ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಬಹುದು. ಆಧುನಿಕ ಮಹಿಳೆಯ ಕನಸುಗಳಿಗೆ ರೆಕ್ಕೆ ಕಟ್ಟುವ ಕೆಲಸವನ್ನು ಚಿರಂತನ ಮಾಡುತ್ತಿದೆ. ಈ ಎರಡೂ ಕಾರ್ಯಕ್ರಮಗಳಿಗೆ ನೊಂದಣಿಯಾಗಲು ಮಾರ್ಚ್ 5 ನೇ ತಾರೀಕು ಕೊನೆಯ ದಿನಾಂಕವಾಗಿರುತ್ತದೆ , ಭಾಗವಹಿಸಲು ಆಸಕ್ತಿ ಉಳ್ಳ ಮಹಿಳೆಯರು “ಚಿರಂತನ” ಸಂಸ್ಥೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.



