ದಾವಣಗೆರೆ: ಪರಿಶಿಷ್ಟ ಜಾತಿ (ಎಸ್ ಸಿ) ಒಳಮೀಸಲಾತಿ ಜಾರಿಗೆ ತಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಂಜಾರ ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂಬರುವ ಸಂತ ಸೇವಾಲಾಲ್ ಜಯಂತ್ಯುತ್ಸವ ವೇದಿಕೆ ಏರಲು ಬಿಡುವುದಿಲ್ಲ. ಕಪ್ಪುಪಟ್ಟಿ ಪ್ರದರ್ಶಿಸಲಾಗುವುದು ಎಂದು ಬಂಜಾರ ಒಳಮೀಸಲಾತಿ ವಿರುದ್ಧ ಹೋರಾಟ ಸಮಿತಿ ಮುಖಂಡ ಶಿವಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ:ಕೊಂಡಜ್ಜಿ ಪೊಲೀಸ್ ಪಬ್ಲಿಕ್ ಶಾಲೆಗೆ ಶಿಕ್ಷಕರ ಭರ್ತಿಗೆ ಅರ್ಜಿ ಆಹ್ವಾನ
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಫೆ. 14 ಮತ್ತು 15ರಂದು ಸಂತಸೇವಾಲಾಲ್ ಜಯಂತಿ ನಡೆಯಲಿದೆ. ಈ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ,ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ , ಸಚಿವರು ಆಗಮಿಸಲಿದ್ದು, ಈ ವೇಳೆ ನಾಯಕರು ವೇದಿಕೆ ಏರಲು ಬಿಡುವುದಿಲ್ಲ ಎಂದರು.
ದಾವಣಗೆರೆ: ಅಡಿಕೆ ಬೆಲೆಯಲ್ಲಿ ದಿಢೀರ್ ಕುಸಿತ; ಏಕಾಏಕಿ ಪ್ರತಿ ಕ್ವಿಂಟಲ್ ಗೆ 2 ಸಾವಿರ ಇಳಿಕೆ
ರಾಜ್ಯ ಸರ್ಕಾರ ಬಂಜಾರ ಸಮುದಾಯಕ್ಕೆ ನಿರಂತರ ಅನ್ಯಾಯ ಮಾಡಿದೆ. ಈ ಸರ್ಕಾರದಲ್ಲಿ ಸಮುದಾಯದ ಪ್ರತಿನಿಧಿಗಳಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಿಲ್ಲ ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಂಜಾನಾಯ್ಕ, ಓಂಕಾರ ನಾಯ್ಕ, ಅರುಣ್‌ಕುಮಾರ್ ಇದ್ದರು.



