ದಾವಣಗೆರೆ: ಅಮೃತ್ ಮಿತ್ರ ಕಾರ್ಯಕ್ರಮದ ತಾಂತ್ರಿಕ ಹಾಗೂ ತಾಂತ್ರಿಕೇತರ ಚಟುವಟಿಕೆಯಡಿ ಅನುಮೋದಿತ ಕಾರ್ಯಕ್ರಮಗಳನ್ನು ಡೇ ನಲ್ಮ್ ಅಭಿಯಾನದಡಿ ನೋಂದಾಯಿತ ಅರ್ಹ ಮಹಿಳಾ ಸ್ವಸಹಾಯ ಸಂಘಗಳಿಂದ ಆಸಕ್ತಿ ವ್ಯಕ್ತಪಡಿಸುವಿಕೆಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರುಗಳು ತಮ್ಮ ಆಸಕ್ತಿಯ ಅಭಿವ್ಯಕ್ತಿಯನ್ನು ಡೇ ನಲ್ಮ್ ವೆಬ್ ಸೈಟ್ www.davanagerecity.mrc.gov.in ವೀಕ್ಷಿಸಿ, ಸೆಪ್ಟೆಂಬರ್ 6 ರೊಳಗಾಗಿ ಡೇನಲ್ಮ್ ವಿಭಾಗ ಕೆಂಪು ಕಟ್ಟಡ ಮಹಾನಗರಪಾಲಿಕೆಗೆ ಸಲ್ಲಿಸಬೇಕೆಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.



