ದಾವಣಗೆರೆ: ಸರ್ಕಾರ ಎತ್ತಿನ. ಬಂಡೆ ಕ್ರೀಡೆಯನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸುವ 15 ಸಂಘ-ಸಂಸ್ಥೆಗಳಿಗೆ ತಲಾ ರೂ.2 ಲಕ್ಷಗಳಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆಯ್ಕೆ ಮಾಡುವ ಸಂಘ-ಸಂಸ್ಥೆಗಳಿಗೆ ಅನುದಾನ ನೀಡಲಾಗುವುದು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನ ಆಯವ್ಯಯಲ್ಲಿ ಗ್ರಾಮೀಣ ಕ್ರೀಡೆಗಳಾದ ಕಂಬಳ, ಎತ್ತಿನಬಂಡಿ ಓಟ ಮತ್ತು ಮಲ್ಲಕಂಬ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುವುದು ಭರವಸೆ ನೀಡಲಾಗಿತ್ತು.
ದಾವಣಗೆರೆ ಜಿಲ್ಲೆಯಲ್ಲಿ ಎತ್ತಿನಬಂಡಿ ಓಟ ಕ್ರೀಡೆಯನ್ನು ಆಯೋಜಿಸಲು ಇಚ್ಚಿಸುವ ಸಂಘ-ಸಂಸ್ಥೆಗಳು ಆಗಸ್ಟ್ 2 ರ ಒಳಗಾಗಿ ಸಂಘ-ಸಂಸ್ಥೆಗಳ ಪೂರ್ಣ ವಿವರಗಳನ್ನು ಕಚೇರಿಗೆ ಸಲ್ಲಿಸಬೇಕು.



