ದಾವಣಗೆರೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಮೆಟ್ರಿಕ್ ನಂತರ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯ-2 ದಾವಣಗೆರೆ ನಗರ ಹೆಚ್.ಐ.ಸಿ-1919 ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ ದಾವಣಗೆರೆ ನಗರ ಹೆಚ್.ಐ.ಸಿ-2614, ಈ ಎರಡು ವಿದ್ಯಾರ್ಥಿ ನಿಲಯಗಳನ್ನು ನಡೆಸಲು ಕನಿಷ್ಠ 900 ಚದರ ಮೀಟರ್ ವಿಸ್ತಿರ್ಣವುಳ್ಳ ಸುಸಜ್ಜಿತವಾದ ಬಾಡಿಗೆ ಕಟ್ಟಡ ಅವಶ್ಯಕತೆ ಇರುತ್ತದೆ.
ಕಟ್ಟಡ ಅಗತ್ಯ ಮೂಲಭೂತ ಸೌಲಭ್ಯವಿರುವ ಕಟ್ಟಡದ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 7 ರೊಳಗಾಗಿ ಅಂಚೆ ಮೂಲಕ, ಖುದ್ದಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಕಲ್ಯಾಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿ.ಮಲ್ಲಿಕಾರ್ಜುನಪ್ಪ ದ್ವಿಪಥ ರಸ್ತೆ, ಶ್ರೀಮತಿ ರತ್ನಮ್ಮ ತೆಲಗಿ ಸಿದ್ದೇಶಿ ರೆಸಿಡೆನ್ಸಿಯಲ್ ಲೇ ಔಟ್ ಶ್ರೀದೇವರಾಜ ಅರಸು ಭವನ, ದಾವಣಗೆರೆ ಇಲ್ಲಿಗೆ ಸಂಪರ್ಕಿಸಲು ತಿಳಿಸಲಾಗಿದೆ.



