ದಾವಣಗೆರೆ: ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯ ಲಿಮಿಟೆಡ್ ಕಂಪನಿ ಸಿಎಸ್‍ಆರ್ ನಿಧಿಯಡಿ ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ ಮತ್ತು ತ್ಯಾವಣಿಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 95.64 ಲಕ್ಷದಲ್ಲಿ ವಿವಿಧ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಪವರ್ ಗ್ರಿಡ್ ಸಿ.ಎಸ್.ಆರ್. ನಿಧಿಯಡಿ ಜಿಲ್ಲೆಗೆ 2023-24 ನೇ ಸಾಲಿನಿಂದ ಇಲ್ಲಿಯವರೆಗೆ ರೂ.12.12 ಕೋಟಿ ಅನುದಾನ ನೀಡಲಾಗಿದೆ. ಇನ್ನೂ ಹೆಚ್ಚಿನ ಅನುದಾನವನ್ನು ಜಿಲ್ಲೆಗೆ ನೀಡಲು ಜಿಲ್ಲಾಧಿಕಾರಿ ಅವರು ಕಂಪನಿ ಅಧಿಕಾರಿಗಳಿಗೆ ಮನವಿ ಮಾಡಿದರು. ಸಿಆರ್ ಸಿ ಸಂಯುಕ್ತ ಪ್ರಾದೇಶಿಕ ಕೌಶಲ್ಯ ಅಭಿವೃದ್ದಿ ಮತ್ತು ಪುನರ್‍ವಸತಿ ಮತ್ತು ದಿವ್ಯಾಂಗ ಜನರ ಸ್ವಾವಲಂಭಿ ಕೇಂದ್ರಕ್ಕೆ ಹೆಚ್ಚಿನ ನೆರವು ನೀಡಲು ಮನವಿ ಮಾಡಿದರ.
ದಾವಣಗೆರೆಯ ದಿವ್ಯಾಂಗ ಜನರ ಸ್ವಾವಲಂಭಿ ಕೇಂದ್ರವು ರಾಜ್ಯದಲ್ಲಿಯೇ ಮೂರನೇ ಕೇಂದ್ರವಾಗಿದೆ. ಇಲ್ಲಿ ಎಲ್ಲಾ ತರಹದ ದಿವ್ಯಾಂಗ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಅತ್ಯುತ್ತಮ ಕೆಲಸವನ್ನು ಕೇಂದ್ರ ಮಾಡುತ್ತಿದೆ. ಕೇಂದ್ರದಲ್ಲಿ ಈಗಾಗಲೇ ಒಂದು ವಾಹನವಿದೆ. ಸುತ್ತಮುತ್ತಲಿನ 15 ಕಿ.ಮೀ. ವ್ಯಾಪ್ತಿಯಲ್ಲಿ ವಾಹನ ಸಂಚರಿಸಬೇಕಾಗಿರುವುದರಿಂದ ಹೆಚ್ಚುವರಿ ವಾಹನದ ಅವಶ್ಯಕತೆ ಇದ್ದು ಸಿಎಸ್‍ಆರ್ ನಿಧಿಯಲ್ಲಿ ನೀಡಲು ಮನವಿ ಮಾಡಿದಾಗ ಪವರ್‍ಗ್ರಿಡ್ ಅಧಿಕಾರಿಗಳು ಪರಿಶೀಲಿಸಿ ಒದಗಿಸಲು ಕ್ರಮ ಜರುಗಿಸಲಾಗುತ್ತದೆ ಎಂದರು.
ಬಸವಾಪಟ್ಟಣ ಮತ್ತು ತ್ಯಾವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೂ.95.64 ಲಕ್ಷಗಳಲ್ಲಿ ಸ್ವಯಂ ಚಾಲಿತ ವಾಟರ್ ಪ್ಯೂರಿಪೈಯರ್, ಸೋಲಾರ್ ದೀಪ ಅಳವಡಿಕೆ, 3 ಕೆವಿ ಸೋಲಾರ್ ವಿದ್ಯುತ್, ನೀರು ಪೂರೈಕೆ, ಬಣ್ಣ, ಟೈಲ್ಸ್, ಬಾಗಿಲು ಅಳವಡಿಕೆ ಸೇರಿದಂತೆ ಚಿಕಿತ್ಸೆಗೆ ಆಗಮಿಸುವವರಿಗೆ ಕುಳಿತುಕೊಳ್ಳಲು ಕುರ್ಚಿ ಅಳವಡಿಕೆ ಸೇರಿದಂತೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಈ ವೇಳೆ ಪವರ್ ಗ್ರಿಡ್‍ನ ಮುಖ್ಯ ಜನರಲ್ ಮ್ಯಾನೇಜರ್ ಎಂ.ಎಸ್.ಹಜೀಬ್, ಹಿರಿಯೂರು ಕೇಂದ್ರದ ಉಪ ವ್ಯವಸ್ಥಾಪಕ ಪಿ.ರವಿಚಾಂದ್, ಆರ್.ಸಿ.ಹೆಚ್.ಅಧಿಕಾರಿ ಡಾ: ಮರುಳಾರಾಧ್ಯ ಉಪಸ್ಥಿತರಿದ್ದರು.