ದಾವಣಗೆರೆ: ಬಾಪೂಜಿ ಪಾಲಿಟೆಕ್ನಿಕ್‌ನಲ್ಲಿ ಮೂರು ವರ್ಷದ ಡಿಪ್ಲೋಮಾ ಇಂಜಿನಿಯರಿಂಗ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಕೋರ್ಸ್‌ಗಳಲ್ಲಿ ಲಭ್ಯವಿವೆ ಎಂದು ಪ್ರಾಚಾರ್ಯರಾದ ಪುಷ್ಪಲತಾ ನಾಡಿಗ ತಿಳಿಸಿದ್ದಾರೆ.
2 ವರ್ಷಗಳ ಐ.ಟಿ.ಐ., ದ್ವಿತೀಯ ಪಿಯುಸಿ (ವಿಜ್ಞಾನ, ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳು ಬಾಪೂಜಿ ಪಾಲಿಟೆಕ್ನಿಕ್‌ನಲ್ಲಿ (ಅನುದಾನಿತ ಮತ್ತು ಅನುದಾನರಹಿತ ಕೋರ್ಸ್ ಗಳಿಗೆ) ಲ್ಯಾಟರಲ್ ಎಂಟ್ರಿ ಮುಖಾಂತರ 2ನೇ ವರ್ಷ, 3ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸ್‌ಗಳಿಗೆ ಆಫ್ -ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜು. 15 ಪ್ರವೇಶಕ್ಕೆ ಕೊನೆಯ ದಿನವಾಗಿದೆ.



