ದಾವಣಗೆರೆ: ತರಳಬಾಳು ಕೃಷಿ ವಿಜ್ಞಾನ ಕೇಂದ್ರದ (Taralabalu Krishi Vigyan Kendra) ತೋಟಗಾರಿಕಾ ವಿಜ್ಞಾನಿ ಬಸವನಗೌಡ ಎಂ ಜಿ ಅವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (Visvesvaraya Technological University) ಜೈವಿಕ ತಂತ್ರಜ್ಞಾನ(Biotechnology) ವಿಭಾಗದಲ್ಲಿ ಪಿಎಚ್ ಡಿ(Doctor of Philosophy) ಪದವಿ ಪ್ರದಾನ ಮಾಡಲಾಯಿತು.
ಇಂಪ್ಯಾಕ್ಟ್ ಆಫ್ ಪರಂಪರಾಗತ್ ಕೃಷಿ ವಿಕಾಸ ಯೋಜನ ಆನ್ ಮೈನ್ಟೆನಿಂಗ್ ಸಸ್ಟೇನಬಲ್ ಲೈವಲ್ಲಿಹುಡ್ ಸೆಕ್ಯೂರಿಟಿ ಆಫ್ ಫಾರ್ಮರ್ಸ್ ಇನ್ ದಾವಣಗೆರೆ ಡಿಸ್ಟ್ರಿಕ್ಟ್ ಎಂಬ ಸಂಶೋಧನಾ ಪ್ರಬಂಧವನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಪ್ರೊಫೆಸರ್ ರಂಗಸ್ವಾಮಿ ಬಿ ಇ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದರು.



