ದಾವಣಗೆರೆ: ಶ್ರೀ ಗಂಗಾಜಿ ಟ್ರಸ್ಟ್ (ರಿ), ಆಶ್ರಯದಲ್ಲಿ ನಡೆಯುತ್ತಿದ್ದ ಅಪ್ಪು ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆ(ಆಂಗ್ಲ) ಮಾಧ್ಯಮ ಬಿ.ಜಿ.ನಿಲಯ, ಹೊಂಡದ ರಸ್ತೆ, ದಾವಣಗೆರೆ. ಈ ಶಾಲೆಗೆ 1 ರಿಂದ 8 ತರಗತಿಯವರೆಗೆ ನೀಡಲಾದ ಮಾನ್ಯತೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆಯಡಿ (Under the Karnataka Education Act) ಹಿಂಪಡೆಯಲಾಗಿದೆ. ಆದ್ದರಿಂದ ಪೋಷಕರು ಈ ಶಾಲೆಗೆ ಮಕ್ಕಳನ್ನು ದಾಖಲಿಸಬಾರದೆಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಶ್ರೀಜಯಪ್ರಕಾಶ್ ನಾರಾಯಣ ವಿದ್ಯಾಸಂಸ್ಥೆ(ರಿ) ಐಗೂರು ಆಶ್ರಯದಲ್ಲಿ ನಡೆಯುತ್ತಿದ್ದ ಶ್ರೀಬಿಸಲೇರಿ ಬಸಮ್ಮ ಭೀಮಪ್ಪ ಪ್ರೌಢಶಾಲೆ, ಕಾಡಜ್ಜಿ, ದಾವಣಗೆರೆ ಉತ್ತರ ವಲಯ ಈ ಶಾಲೆಗೆ 8 ರಿಂದ 10 ತರಗತಿಯವರೆಗೆ ನೀಡಲಾದ ಮಾನ್ಯತೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಹಿಂಪಡೆಯಲಾಗಿದೆ. ಆದ್ದರಿಂದ ಪೋಷಕರು ಈ ಶಾಲೆಗೆ ಮಕ್ಕಳನ್ನು ದಾಖಲಿಸಬಾರದೆಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.



