ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ದೀಟೂರು ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿದ್ದ ಸ್ವಾಗತ ಕಮಾನು ಕುಸಿದು ಬಿದ್ದ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬ ಕಾರ್ಮಿಕನಿಗೆ ಗಾಯವಾಗಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದಾರೆ.
30 ಅಡಿಯ ಈ ರಸ್ತೆಯ ಎರಡು ಕಡೆ ಕಾಂಕ್ರೀಟ್ ಪಿಲ್ಲರ್ ನಿರ್ಮಿಸಲಾಗಿತ್ತು. ಎರಡು ಪಿಲ್ಲರ್‌ಗಳ ಮಧ್ಯೆ ಆರ್‌ಸಿಸಿ ಹಾಕುವಾಗ ಈ ದುರ್ಘಟನೆ ನಡೆದಿದೆ. ದೀಟೂರು ಗ್ರಾಮಸ್ಥರಿಂದ ಗ್ರಾಮದ ಪ್ರವೇಶ ಸ್ಥಳಕ್ಕೆ ಸ್ವಾಗತ ಕಮಾನು ನಿರ್ಮಿಸಲು ಯೋಜನೆ ರೂಪಿಸಿದ್ದರು.
15 ಕಾರ್ಮಿಕರಿಂದ ಆರ್‌ಸಿಸಿ ಹಾಕುವ ಕಾರ್ಯ ನಡೆಯುತ್ತಿತ್ತು.ಈ ವೇಳೆ ಆರ್‌ಸಿಸಿಗೆ ಆಧಾರವಾಗಿಟ್ಟಿದ್ದ ಕಟ್ಟಿಗೆಗಳು ಉರುಳಿ ಬಿದ್ದಿದ್ದು, ಅದರ ಜೊತೆಗೆ ಕಬ್ಬಿಣದ ಸರಳಿನ ಹಂದರ ಹಾಗೂ ಆರ್‌ಸಿಸಿಯು ಕುಸಿದು ಬಿದ್ದಿದೆ. ಒಬ್ಬ ಕಾರ್ಮಿಕ ಕೆಳಕ್ಕೆ ಸಿಲುಕಿದ್ದನು, ಅಲ್ಲೇ ಇದ್ದ ಕಾರ್ಮಿಕರು ರಕ್ಷಣೆ ಮಾಡಿದ್ದಾರೆ.



