ದಾವಣಗೆರೆ: ದಾವಣಗೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನನ್ನು ಹೋಮ್ಗಾರ್ಡ್ ರಕ್ಷಿಸಿದ ಘಟನೆ ನಡೆದಿದೆ.
ರಾಧಾಕೃಷ್ಣ ಎಂಬುವವರು ಚಲಿಸುತ್ತಿದ್ದ ಜನಶತಾಬ್ದಿ ಎಕ್ಸ್ಪ್ರೆಸ್ ರೈಲನ್ನು ಓಡಿ ಬಂದು ಹತ್ತಲು ಹೋದಾಗ ಅಯತಪ್ಪಿ ಬಿದ್ದಿದ್ದಾರೆ. ಕೂಡಲೇ ಅಲ್ಲೇ ಇದ್ದ ಹೋಮ್ಗಾರ್ಡ್ ಲಕ್ಷ್ಮಣ್ ನಾಯ್ಕ್ ಮೇಲೆ ಎಳೆದುಕೊಂಡು ರಕ್ಷಣೆ ಮಾಡಿದ್ದಾರೆ.
ರೈಲು ಮೂವ್ ಆದ ಮೇಲೆ ರಾಧಾಕೃಷ್ಣ ಓಡೋಡಿ ಬಂದು ರೈಲು ಹತ್ತಲು ಮುಂದಾಗಿದ್ದರು. ಈ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಹೋಮ್ಗಾರ್ಡ್ ರಕ್ಷಣೆ ಮಾಡಿದ್ದು , ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೋಮ್ಗಾರ್ಡ್ ಲಕ್ಷ್ಮಣ್ ನಾಯ್ಕ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.