ದಾವಣಗೆರೆ: ಜಮೀನಿನಲ್ಲಿದ್ದ ಕುರಿ ಹಿಂಡಿನಿಂದ ಮೇಕೆಯೊಂದನ್ನು ಚಿರತೆ ಹೊತ್ತೊಯ್ದಿದ್ದು, ಸುತ್ತಮಯತ್ತಲಿನ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ರಾಂಫುರದಲ್ಲಿ ಈ ಘಟನೆ ನಡೆದಿದೆ.
ಜಮೀನಿನಲ್ಲಿ ಬೀಡು ಬಿಟ್ಟಿದ್ದ ಕುರಿಗಾಹಿಗಳ ಎದುರೇ ಚಿರತೆಯೊಂದು ಮೇಕೆ ಹೊತ್ತೊಯ್ದಿದೆ. ಕುರಿಗಾಹಿಗಳು ಜೋರಾಗಿ ಕೂಗಿದ್ದರಿಂದ ಚಿರತೆ ಮೆಕ್ಕೆಜೋಳದ ಹೊಲದಲ್ಲಿ ಪರಾರಿಯಾಗಿದೆ. ಸ್ಥಳಕ್ಕೆ ಚನ್ನಗಿರಿ ಮಾವಿನಕೋಟೆ ವಲಯ ಅರಣ್ಯ ಇಲಾಖೆ ಗಸ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಚರಿತೆ ಸೆರೆಗೆ ಬೋನು ಇಡಲಾಗುವುದು ಎಂದು ತಿಳಿಸಿದ್ದಾರೆ.
ಸಾಸ್ವೆಹಳ್ಳಿ ಸುತ್ತಮುತ್ತಲೂ ಗುಡ್ಡಗಳು ಇರುವುದರಿಂದ ಕಾಡು ಪ್ರಾಣಿಗಳು ಹೆಚ್ಚಾಗಿವೆ. ಆಹಾರ ಹುಡುಕಿಕೊಂಡು ಅವು ಓಡಾಡುವುದರಿಂದ ರೈತರು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.



