ದಾವಣಗೆರೆ: ಜಿಲ್ಲಾ ಮಡಿವಾಳ ಮಾಚಿದೇವ ಸಂಘದಿಂದ ಮಡಿವಾಳ ಸಮುದಾಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. 2023 -24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ, ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಸಲ್ಲಿಸಬಹುದು.
ಅರ್ಹರು ಆ. 23ರೊಳಗೆ ಸ್ವವಿವರವುಳ್ಳ ಅರ್ಜಿಗಳನ್ನು ವಿನೋಬಾ ನಗರದ 1ನೇ ಮುಖ್ಯ ರಸ್ತೆಯ, 17ನೇ ತಿರುವಿನಲ್ಲಿನ ಮಡಿವಾಳ ಮಾಚಿದೇವ ಸಮುದಾಯ ಭವನ, ದಾವಣಗೆರೆ
ಇಲ್ಲಿಗೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತಿಯ ಪಿಯುಸಿ ಅಂಕಪಟ್ಟಿ, ವರ್ಗಾವಣೆ ಪತ್ರ (ಟಿಸಿ), ತಮ್ಮ ಇತ್ತೀಚಿನ ಪಾಸ್‌ಪೋರ್ಟ್ ಭಾವಚಿತ್ರಗಳೊಂದಿಗೆ ತಮ್ಮ ದಾಖಲಾತಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಎಂ.ನಾಗೇಂದ್ರಪ್ಪ (ಮೊಃ 94480-00077), ಆರ್.ಎನ್. ಧನಂಜಯ್ (98440-01462), ಸುರೇಶ್ ಎಂ.ಕೋಗುಂಡೆ (98804 97271), ಸಿ. ಗುಡ್ಡಪ್ಪ (88926 -24949), ಪಿ.ಮಂಜುನಾಥ್ (9980087033) ಸಂಪರ್ಕಿಸಬಹುದು.