ಬೆಂಗಳೂರು: ದಾವಣಗೆರೆ ವೃತ್ತಿ ರಂಗಾಯಣದ ನಿರ್ದೇಶಕರನ್ನಾಗಿ ಮಲ್ಲಿಕಾರ್ಜುನ ಕಡಕೋಳ ಅವರನನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಎರಡು ವರ್ಷಕಾಲ ಖಾಲಿ ಇದ್ದ ಹುದ್ದೆಗೆ ಮೂರು ವರ್ಷದ ಅವಧಿಗೆ ನೇಮಕ ಮಾಡಲಾಗಿದೆ.
ಈ ಹಿಂದೆ ಕರ್ನಾಟಕ ನಾಟಕ ಅಕಾಡೆಮಿ ಮತ್ತು ರಂಗ ಸಮಾಜದ ಸದಸ್ಯರಾಗಿದ್ದರು. ಬಾ ಅತಿಥಿ, ರಂಗ ಸಮಾಗಮ, ತಿಂಗಳ ಬೆಳಕಲಿ ರಂಗದ ಮೆರಗು ಮೊದಲಾದ ಕಾರ್ಯಕ್ರಮ ರೂಪಿಸುವ ಮೂಲಕ ಕಡಕೋಳ ಅವರು ರಂಗಾಸಕ್ತರು ಮತ್ತು ಸರಕಾರದ ಗಮನ ಸೆಳೆದಿದ್ದರು. ದಾವಣಗೆರೆ ವೃತ್ತಿ ರಂಗಾಯಣ ಸ್ಥಾಪನೆಯಲ್ಲೂ ಪರಿಶ್ರಮಿಸಿದ್ದರು.