ದಾವಣಗೆರೆ: ಸಾದರ ನೌಕರರ ಬಳಗದಿಂದ ಎಸ್ಸೆಸ್ಸೆಲ್ಸಿಯಲ್ಲಿ ಶೇ.90 ಹಾಗೂ ಪಿಯುಸಿಯಲ್ಲಿ ಶೇ.85ಕ್ಕಿಂತ ಅತಿ ಹೆಚ್ಚು ಅಂಕ ಗಳಿಸಿದ ಸಾದರ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಸಾದರ ಸಾಧನಾ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ (ಸಿಬಿಎಸ್‌ಇ) ಹಾಗೂ ರಾಜ್ಯ ಪಠ್ಯ ಕ್ರಮಕ್ಕೆ ಪ್ರತ್ಯೇಕವಾಗಿ ಮತ್ತು ಪಿಯುಸಿ (ಕಲಾ, ವಿಜ್ಞಾನ, ವಾಣಿಜ್ಯ) ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾದರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸ್ವ-ವಿಳಾಸದೊಂದಿಗೆ ಅರ್ಜಿಯನ್ನು ದೃಢೀಕೃತ ಅಂಕಪಟ್ಟಿ ಹಾಗೂ ಪಾಸ್ ಪೋರ್ಟ್ ಅಳತೆ ಭಾವಚಿತ್ರದೊಂದಿಗೆ ಜೂನ್ 5 ರೊಳಗೆ ಅರ್ಜಿ ಸಲ್ಲಿಸಬೇಕು. ವಿಳಾಸ: ಕೆ.ನಾಗಪ್ಪ ಅಧ್ಯಕ್ಷರು, ಸಾದರ ನೌಕರರ ಬಳಗ, ಸಾದರ ಪತ್ತಿನ ಸಹಕಾರಿ ಸೌಹಾರ್ದ ಬ್ಯಾಂಕ್, 2000/ ಎ28, 16ಬಿ ಕ್ರಾಸ್, ತರಳಬಾಳು ಬಡಾವಣೆ, ದಾವಣಗೆರೆ. , ಹೆಚ್ಚಿನ ಮಾಹಿತಿಗೆ ಮೊ: 9844501366, 9886339984
ಸಂಪರ್ಕಿಸಿ.



