ದಾವಣಗೆರೆ: ತುರ್ತು ಸಂದರ್ಭಗಳಲ್ಲಿ ರಕ್ಷಣೆ, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ತಂಡದಿಂದ ಅಣಕು ಪ್ರದರ್ಶನದಾವಣಗೆರೆ: ತುರ್ತು ಸಂದರ್ಭಗಳಲ್ಲಿ ಜನರು ಮತ್ತು ಆಸ್ತಿ, ಪಾಸ್ತಿಗಳ ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ತಂಡದಿಂದ ಅಣಕು ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ತಂಡದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡದಿಂದ ಅಣಕು ಪ್ರದರ್ಶನವನ್ನು ಫೆಬ್ರವರಿ 6 ರಿಂದ 19 ರ ವರೆಗೆ ವಿವಿಧ ಸ್ಥಳಗಳಲ್ಲಿ ಅಣಕು ಪ್ರದರ್ಶನ ಏರ್ಪಡಿಸುವ ಮೂಲಕ ಸಾರ್ವಜನಿಕರಿಗೆ, ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತದೆ ಎಂದರು.
ಫೆಬ್ರವರಿ 6.ರಂದು ತಹಶೀಲ್ದಾರ್, ಅಗ್ನಿಶಾಮಕ, ಅರಣ್ಯ, ಪೊಲೀಸ್, ನೆಹರು ಯುವ ಕೇಂದ್ರ, ಗೃಹರಕ್ಷಕದಳ, ಹಾಗೂ ಇತತರಿಗೆ, ಫೆ.7 ರಂದು ತುಂಗಭದ್ರಾ ಸಭಾಂಗಣದಲ್ಲಿ ಅರ್ಧ ದಿನ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಚೇರಿ, ಅರಣ್ಯ, ಪೊಲೀಸ್, ಅಗ್ನಿ ಶಾಮಕ ಹಾಗೂ ಇತರೆ ಇಲಾಖೆಯವರಿಗೆ ತುರ್ತು ರಕ್ಷಣಾ ಕಾರ್ಯಗಳ ನಿರ್ವಹಣೆ, ಫೆ.8 ತುರ್ತು ನಿರ್ವಹಣೆಗೆ ಸಂಬಂಧಿಸಿದಂತೆ ದಾವಣಗೆರೆ ದೇವರಾಜ ಅರಸು ಮೈದಾನದಲ್ಲಿ, ಫೆ.9 ರಂದು ಹರಿಹರದ ಗಾಂಧಿ ಮೈದಾನ, ಫೆ.10 ರಂದು ದಾವಣಗೆರೆ ವಿದ್ಯಾನಗರದಲ್ಲಿನ ತರಳಬಾಳು ಶಾಲೆಯಲ್ಲಿ ತುರ್ತು ರಕ್ಷಣೆ, ಫೆ.12 ರಂದು ಹಾಲವರ್ತಿ ಬನ್ಸಲ್ ಆರಾಧ್ಯ ಸ್ಟೀಲ್ ಪ್ರೈ.ಲಿ ಇಲ್ಲಿಗೆ ಭೇಟಿ ನೀಡಿ ಕೆಮಿಕಲ್ ಅವಘಡಗಳ ನಿಯಂತ್ರಣದ ಕುರಿತು, ಫೆ.13 ರಂದು ನಿಟುವಳ್ಳಿಯ ಸಿದ್ದಗಂಗಾ ಶಾಲೆಯಲ್ಲಿ ತುರ್ತು ಸಂದರ್ಭ ನಿರ್ವಹಣೆ, ಫೆ.14 ರಂದು ದಾವಣಗೆರೆಯಲ್ಲಿ ಸೀತಮ್ಮ ಹೈಸ್ಕೂಲ್‍ನಲ್ಲಿ ಅವಘಡಗಳಿಂದ ಶಾಲಾ ರಕ್ಷಣೆ ಮತ್ತು ವನಮಹೋತ್ಸವ, ಫೆ.15 ರಂದು ಹರಿಹರದ ಮರಿಯನಿವಾಸ್ ಶಾಲೆಯಲ್ಲಿ ತುರ್ತು ಮುಂಜಾಗ್ರತ ಕ್ರಮ, ಫೆ.16 ರಂದು ದಾ.ವಿ.ವಿ.ನಲ್ಲಿ ಸ್ವಯಂ ಸೇವಕರಿಗೆ ಒಂದು ದಿನದ ತರಬೇತಿ, ಫೆ.17 ರಂದು ದಾವಣಗೆರೆ ತಾ.ಪಂ.ನಲ್ಲಿ ವಿಶೇಷಚೇತನರನ್ನು ನಾಗರೀಕ ಸೇವೆಯಲ್ಲಿ ಸಂಘಟನೆ ಬಗ್ಗೆ ತರಬೇತಿ, ಫೆ.19 ರಂದು ಸೈಬರ್ ಸೆಕ್ಯೂರಿಟಿ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆ ಕುರಿತು ತರಬೇತಿ ನಡೆಯಲಿದೆ.
ಮತ್ತು ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಸಂಪರ್ಕಿಸಲು ನೀಡಿರುವ ಸಹಾಯವಾಣಿ ಸಂಖ್ಯೆಗಳನ್ನು ಜಿಲ್ಲೆಯ ಪ್ರತಿ ಕಚೇರಿಗಳಲ್ಲಿ ಮತ್ತು ಶಾಲಾ, ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಲು ಸೂಚಿಸಲಾಯಿತು. ಯಾವುದೇ ಸಾರ್ವಜನಿಕ ಆಸ್ತಿ, ಜನ, ಜಾನುವಾರು, ಜೀವ ಹಾನಿಯಾಗದಂತೆ ಎಂತಹ ಸಂದರ್ಭದಲ್ಲಿಯೂ ಜಾಗೃತಿಯಿಂದ ಸಿದ್ದವಿರಲು ಮತ್ತು ರಕ್ಷಣಾತ್ಮಕ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರಿನ್ ಭಾನು ಎಸ್.ಬಳ್ಳಾರಿ, ಉಪಕಾರ್ಯದರ್ಶಿ ಕೃಷ್ಣನಾಯ್ಕ, ಎನ್.ಡಿ.ಆರ್.ಎಫ್ ತಂಡದ ಅಜಯ್ ಕುಮಾರ್ ಮತ್ತು ತಂಡದ ಇತರೆ ಸದಸ್ಯರು ಉಪಸ್ಥಿತರಿದ್ದರು.



