ದಾವಣಗೆರೆ: ಬಿಜೆಪಿಗೆ ಮರು ಸೇರ್ಪಡೆಯಿಂದ ಮತ್ತೆ ಮನೆಗೆ ಮರಳಿದ ಸಂತೋಷ ಇದೆ. ಕಾಂಗ್ರೆಸ್ ಗೆ ಹೋಗಿದ್ದಕ್ಕೆ ಯಾವ ಪಾಪಪ್ರಜ್ಞೆ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ ನಂತರ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ದೇಶದ 100 ಕೋಟಿ ಜನರ ಆಸೆ. ಮೋದಿ ಅವರ ಕೈ ಬಲಪಡಿಸಲು ಮತ್ತೆ ಬಿಜರಪಿ ಸೇತಿದ್ದೇನರ. ಈ ಮೂಲಕ ಅಳಿಲು ಸೇವೆ ಮಾಡುತ್ತೇನೆ ಎಂದರು.
ಬಿಜೆಪಿಗೆ ಸೇರ್ಪಡೆಯಾಗಬೇಕು ಎಂಬುದು ಕಾರ್ಯಕರ್ತರ ಅಪೇಕ್ಷೆ ಆಗಿತ್ತು. ಎಲ್ಲರು ಒತ್ತಡ ಸಹ ಹಾಕಿದ್ದರು. ಇದಕ್ಕೆ ಪೂರಕ ಎನ್ನುವಂತೆ ಬಿಜೆಪಿ ಕೇಂದ್ರದ ನಾಯಕರು ಸಹ ಕರೆದು ಮಾತನಾಡಿದರು. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಮಾತುಕತೆ ನಡೆಸಿದರು. ಈಗ ಬಿಜೆಪಿಗೆ ಸೇರಿದ್ದರಿಂದ ಖುಷಿ ತಂದಿದೆ.
2019ರ ಲೋಕಸಭಾ ಚುನಾವಣೆಯ ವೇಳೆ ಕರ್ನಾಟಕದಲ್ಲಿ ಬಿಜೆಪಿ 25 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಬೇಕಿದೆ. ಯಾವುದೇ ಷರತ್ತು ವಿಧಿಸದೇ ಬಿಜೆಪಿಗೆ ಮತ್ತೆ ಸೇರ್ಪಡೆಯಾಗಿದ್ದೇನೆ. ವರಿಷ್ಠರು ನನಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ . ಇನ್ನೂ ಶಾಸಕ ಲಕ್ಷ್ಮಣ ಸವದಿ ನನ್ನ ಸಂಪರ್ಕದಲ್ಲಿ ಇಲ್ಲ ಎಂದರು.
ಬಿಜೆಪಿ ಸಂಸದ ಬಿ. ವೈ. ರಾಘವೇಂದ್ರ ಗೆಲ್ಲಬೇಕು ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಬಅವರಿಗೂ ಬಿಜೆಪಿಯವರು ಗೆಲ್ಲಬೇಕೆಂಬ ಅಪೇಕ್ಷೆ ಇದೆ ಎನಿಸುತ್ತದೆ ಎಂದರು. ಈ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಲೋಕಿಕೆರೆ ನಾಗರಾಜು, ರವಿಕುಮಾರ್, ಮಾಜಿ ಶಾಸಕ ಗುರುಸಿದ್ದನಗೌಡ್ರು, ಕೆ. ಬಿ. ಕೊಟ್ರೇಶ್, ಮತ್ತಿತರರು ಹಾಜರಿದ್ದರು.



