ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ಅವರು ಪ್ರತಿದಿನ ವಾರ್ಡ್ ನಲ್ಲಿ ಸ್ವಚ್ಛತಾ ಕೆಲಸ ಮಾಡುವ ಪೌರಕಾರ್ಮಿಕ ನೌಕರರಿಗೆ ಸ್ಟೀಲ್ ದಿಂಬಿಗೆ ಗಿಫ್ಟ್ ನೀಡುವ ಮೂಲಕ ವಿಶೇಷವಾಗಿ ದಸರಾ ಹಬ್ಬದ ಶುಭಾಶಯ ಕೋರಿದರು. 31 ಮತ್ತು 41 ನೇ ವಾರ್ಡಿನ 20 ಪೌರ ಕಾರ್ಮಿಕರಿಗೆ ಇಂದು ಸ್ಟೀಲ್ ದಿಂಬಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಎರಡು ವಾರ್ಡಿನ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



