Connect with us

Dvgsuddi Kannada | online news portal | Kannada news online

ದಾವಣಗೆರೆ: ಬಾಲ ಮಂದಿರ, ಮಹಿಳಾ ಹಾಸ್ಟೆಲ್ ಗಳಿಗೆ ಬಿಸಿ ನೀರು ಪೂರೈಸುವ ಕಾಮಗಾರಿಗೆ 1.63 ಕೋಟಿ ಅನುದಾನ ನೀಡಲು ಪವರ್‌ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಸಹಿ

IMG 20231205 070714

ದಾವಣಗೆರೆ

ದಾವಣಗೆರೆ: ಬಾಲ ಮಂದಿರ, ಮಹಿಳಾ ಹಾಸ್ಟೆಲ್ ಗಳಿಗೆ ಬಿಸಿ ನೀರು ಪೂರೈಸುವ ಕಾಮಗಾರಿಗೆ 1.63 ಕೋಟಿ ಅನುದಾನ ನೀಡಲು ಪವರ್‌ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಸಹಿ

ದಾವಣಗೆರೆ: ಪವರ್‌ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಸಂಸ್ಥೆಯಿಂದ ಸಿಎಸ್‌ಆರ್‌ ನಿಧಿಯಡಿ ಜಿಲ್ಲೆಯ ಬಾಲಕಿಯರ ಬಾಲ ಮಂದಿರ, ರಾಜ್ಯ ಮಹಿಳಾ ನಿಲಯ, ಇಎಸ್‌ಐ ಆಸ್ಪತ್ರೆಯಲ್ಲಿ ಬಿಸಿ ನೀರು ಪೂರೈಸಲು 1.63 ಕೋಟಿ ಕಾಮಗಾರಿಗೆ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್‌, ಪವರ್‌ಗ್ರಿಡ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ಹರೀಶ ನಾಯರ್ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಒಡ೦ಬಡಿಕೆಗೆ ಸಹಿ ಮಾಡಿದ ನಂತರ ಮಾತನಾಡಿದ ಡಿಸಿ ಡಾ.ವೆಂಕಟೇಶ, ಪವರ್‌ಗ್ರಿಡ್ ಕಾರ್ಪೋರೇಷನ್ ವಿವಿಧ 4 ಕಾಮಗಾರಿಗಳಿಗೆ‌ ಸಂಸ್ಥೆಯಿಂದ ಪ್ರಸಕ್ತ ವರ್ಷ 15 ಕೋಟಿ ಮೊತ್ತಕ್ಕೆ ಒಡಂಬಡಿಕೆ ಮಾಡಿಕೊಂಡು ಅನುಷ್ಠಾನಗೊಳಿಸಲಾಗುತ್ತಿದೆ. ಬರುವ ಮಾರ್ಚ್ 2024ರ ಅಂತ್ಯದೊಳಗೆ ಈ ಎಲ್ಲಾ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವ ಮೂಲಕ ಉಪಯುಕ್ತತಾ ಪ್ರಮಾಣಪತ್ರ
ನೀಡಬೇಕಿದೆ. ಈ ನಿಟ್ಟಿನಲ್ಲಿ ಕಾಲಮಿತಿಯಲ್ಲಿ ಇಲಾಖೆಯವರು ಸಿವಿಲ್ ಕಾಮಗಾರಿ, ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಆರೋಗ್ಯಾಧಿಕಾರಿ, ಜಿಲ್ಲಾ ಸರ್ಜನ್, ಕೆಆರ್‌ಐಡಿಎಲ್ ಇಂಜಿನಿಯರ್‌ಗಳಿಗೆ ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ, ಪವರ್‌ ಗ್ರಿಡ್‌ನ ಅಧಿಕಾರಿಗಳು ಇದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top