ದಾವಣಗೆರೆ: 7, 8, 9 ಮತ್ತು 10ನೇ ತರಗತಿಗಳನ್ನು ಓದಿ ಶಾಲೆಬಿಟ್ಟವರಿಗೆ/ಫೇಲಾದವರಿಗೆ ಜೆಎಸ್‌ಎಸ್ ಕರ್ನಾಟಕ ಮುಕ್ತ ವಿದ್ಯಾಲಯ, ಮೈಸೂರು ಮತ್ತು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಾಂಕನ ನಿರ್ಣಯ ಮಂಡಳಿ,ಮಲ್ಲೇಶ್ವರ, ಬೆಂಗಳೂರು ಸಂಯುಕ್ತಾಶ್ರಯದಲ್ಲಿ ನೇರ ಪರೀಕ್ಷೆ ಬರೆಯುವ ಸುರ್ಣಾವಕಾಶ ಕಲ್ಪಿಸಿದೆ.
2023-24ನೇ ಸಾಲಿನ ಮಾರ್ಚ್ ತಿಂಗಳಿನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ನೇರ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹೆಚ್ಚಿನ ಮಾಹಿತಿಗೆ ಕೆ.ಬಸವರಾಜಪ್ಪ ಸಮನ್ವಯ ಅಧಿಕಾರಿಗಳು, ಜೆಎಸ್‌ಎಸ್ ಕರ್ನಾಟಕ ಮುಕ್ತ
ವಿದ್ಯಾಲಯ/ಜ್ಞಾನ ವಾಹಿನಿ ಕರೆಸ್ಪಾಂಡೆನ್ಸ್ ಕಾಲೇಜ್, ನಿಟುವಳ್ಳಿ, ದಾವಣಗೆರೆ-577004, ಮೊ. ನಂ.9449679346, 8971018943 ಸಂಪರ್ಕಿಸಬಹುದು.



