Connect with us

Dvgsuddi Kannada | online news portal | Kannada news online

ದಾವಣಗೆರೆ: ಮಹಿಳೆಯರಿಗೆ 10 ದಿನದ ಉದ್ಯಮಶೀಲತಾಭಿವೃದ್ಧಿ ತರಬೇತಿ ಶಿಬಿರ

ದಾವಣಗೆರೆ

ದಾವಣಗೆರೆ: ಮಹಿಳೆಯರಿಗೆ 10 ದಿನದ ಉದ್ಯಮಶೀಲತಾಭಿವೃದ್ಧಿ ತರಬೇತಿ ಶಿಬಿರ

ದಾವಣಗೆರೆ: ನಗರದ ಆಂಜನೇಯ ಬಡಾವಣೆಯಲ್ಲಿರುವ ಯೋಗ ಮಂದಿರದಲ್ಲಿ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಜಿಲ್ಲೆಯ ಆಸಕ್ತ ಮಹಿಳಾ ಉದ್ಯಮಾಕಾಂಕ್ಷಿಗಳಿಗೆ ಅಕ್ಟೋಬರ್ 25 ರಿಂದ ನವೆಂಬರ್ 3 ರವರೆಗೆ ಉದ್ಯಮಶೀಲತಾಭಿವೃದ್ಧಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸಿಡಾಕ್(ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ, ಧಾರವಾಡ) ಸಂಸ್ಥೆಯಿಂದ ಈ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಶಿಬಿರದಲ್ಲಿ ಭಾಗವಹಿಸುವ ಅಭ್ಯರ್ಥಿಗಳು 18 ರಿಂದ 55 ವರ್ಷ ವಯೋಮಾನದವರಾಗಿರಬೇಕು.

ಅಭ್ಯರ್ಥಿಗಳು 2 ಪಾಸ್‍ಪೋರ್ಟ ಅಳತೆಯ ಫೋಟೋ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ, ಜಂಟಿ ನಿರ್ದೇಶಕರ ಕಛೇರಿ, ಸಿಡಾಕ್, ಪ್ಲಾಟ್ ನಂ: 76ಎ-(ಪಿ1), ಕರೂರು ಕೈಗಾರಿಕಾ ಪ್ರದೇಶ, ಪಿ.ಬಿ. ರಸ್ತೆ, ದಾವಣಗೆರೆ. ತರಬೇತಿದಾರರಾದ ವಿನಯ ಜಿ.ಕೆ. ಮೊ.ಸಂ: 9886115200 ಹಾಗೂ ಬಸವರಾಜ ಜಿ. ಬಿ. ಮೊ.ಸಂ: 9164742033 ಸಂಪರ್ಕಿಸಲು ಸಿಡಾಕ್‍ನ ಜಿಲ್ಲಾ ಜಂಟಿ ನಿರ್ದೇಶಕರು ಆರ್.ಪಿ. ಪಾಟೀಲ್ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top