ದಾವಣಗೆರೆ: ಲಿಂಗಾಯತ ಎಂಬುದು ಕೇವಲ ಜಾತಿಯಲ್ಲ, ಅದೊಂದು ಧರ್ಮ ಎಂದು ಚನ್ನಗಿರಿಯ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಎಂಬುದು ಒಂದು ಸ್ವತಂತ್ರ ಧರ್ಮ ಆಗಬೇಕು. ಇದಕ್ಕಾಗಿ ನಮ್ಮ ಸಂಘರ್ಷ ನಿರಂತರ. ಲಿಂಗಾಯತ ಎಂಬುದು ಒಂದು ಜಾತಿಯಾಗಿ ಉಳಿಯಬಾರದು. ಸಿಖ್ , ಜೈನರಂತೆ ಲಿಂಗಾಯತ ಎಂಬುದು ಒಂದು ಸ್ವತಂತ್ರ ಧರ್ಮ ಆಗಬೇಕು ಎಂದು ತಿಳಿಸಿದರು.
ಎಲ್ಲರಿಗೂ ಸಮ ಬಾಳು ಸಮ ಪಾಲು ಎಂಬ ಕಾಯಕ ಸಿದ್ದಾಂತದ ಮೇಲೆ ಬಸಣ್ಣ ಲಿಂಗಾಯತ ಧರ್ಮವನ್ನು ಹುಟ್ಟುಹಾಕಿದ್ದಾರೆ.ಲಿಂಗಾಯತ ಎಲ್ಲಾ ಒಳ ಪಂಗಡಗಳು ಕೇಂದ್ರದ ಓಬಿಸಿ ಪಟ್ಟಿಗೆ ಸೇರ್ಪಡೆ ಆಗಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.