ದಾವಣಗೆರೆ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋದ ಯುವತಿ ಚಿಕ್ಕಜಾಜೂರು ಫ್ಲಾಟ್ ಫಾರಂ ಮೇಲೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಚಿಕ್ಕಎಮ್ಮಿಗನೂರು ಗ್ರಾಮದ ರಾಜಶೇಖರಪ್ಪ ಅವರ ಪುತ್ರಿ ಪಿ.ಆರ್. ಪ್ರೀತಿ (26) ಮೃತ ಯುವತಿಯಾಗಿದ್ದಾರೆ. ಇವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ತಂದೆ ತಾಯಿಯನ್ನು ನೋಡಲು ಸ್ವಗ್ರಾಮಕ್ಕೆ ಬರಲು ದಾವಣಗೆರೆ ಎಕ್ಸ್‌ಪ್ರೆಸ್ ರೈಲಿಗೆ ಜು.27 ರಾತ್ರಿ ಬಂದಿದ್ದು, ಚಿಕ್ಕಜಾಜೂರು ಫ್ಲಾಟ್ ಫಾರಂನಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಸಾವನ್ನಪ್ಪಿದ್ದಾರೆ.



