Connect with us

Dvgsuddi Kannada | online news portal | Kannada news online

ಹೋಟೆಲ್, ಆಟೋ ಮೊಬೈಲ್ ಸೇರಿ ಎಲ್ಲಾ ಶಾಪ್ ಮಾಲೀಕರು ತಮ್ಮ ಉದ್ಯೋಗಿಗಳ ಮಾಹಿತಿಯನ್ನು ಉದ್ಯೋಗ ವಿನಿಮಯ ಕೇಂದ್ರಕ್ಕೆ ಸಲ್ಲಿಸುವುದು ಕಡ್ಡಾಯ ..!

davangerer bord

ದಾವಣಗೆರೆ

ಹೋಟೆಲ್, ಆಟೋ ಮೊಬೈಲ್ ಸೇರಿ ಎಲ್ಲಾ ಶಾಪ್ ಮಾಲೀಕರು ತಮ್ಮ ಉದ್ಯೋಗಿಗಳ ಮಾಹಿತಿಯನ್ನು ಉದ್ಯೋಗ ವಿನಿಮಯ ಕೇಂದ್ರಕ್ಕೆ ಸಲ್ಲಿಸುವುದು ಕಡ್ಡಾಯ ..!

ದಾವಣಗೆರೆ: ಜಿಲ್ಲೆಯ ಎಲ್ಲಾ ನಿಯೋಜಕರು, ಕಂಪನಿಗಳು, ಕಾರ್ಖಾನೆಗಳು, ಸ್ಥಾಪನೆಗಳು, ಹೋಟೆಲ್ ಉದ್ಯಮಿಗಳು ,ಲಾಡ್ಜ್ ಗಳು, ಆಟೋಮೊಬೈಲ್, ಷೋರೂಂಗಳು ಸೇರಿದಂತೆ ಅಂಗಡಿಗಳು, ಉದ್ದಿಮೆಗಳು ಸ್ಥಳೀಯ ಉದ್ಯೋಗ ವಿನಿಮಯ ಕೇಂದ್ರಕ್ಕೆ ತಮ್ಮ ಉದ್ಯೋಗಿಗಳ ಮಾಹಿತಿಯನ್ನು ಕಡ್ಡಾಯವಾಗಿ ಪ್ರತಿ ತ್ರೈಮಾಸಿಕ ಕೊನೆಗೊಂಡ ಒಂದು ತಿಂಗಳೊಳಗೆ ಸಲ್ಲಿಸಬೇಕೆಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಉದ್ಯೋಗ ವಿನಿಮಯ ಕೇಂದ್ರಗಳ ಖಾಲಿ ಹುದ್ದೆಗಳ ಕಡ್ಡಾಯ ಅಧಿಸೂಚನೆ ಅಧಿನಿಯಮ – 1959 ಮತ್ತು 1960ರ ನಿಯಮಗಳನ್ವಯ ಜಿಲ್ಲೆಯ ಎಲ್ಲಾ ದೊಡ್ಡ ದೊಡ್ಡ ಅಂಗಡಿಗಳು, ಉದ್ದಿಮೆಗಳು ನಿಗದಿತ ನಮೂನೆ ಇ.ಆರ್-1ರಲ್ಲಿ ಉದ್ಯೋಗಿಗಳ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅಲ್ಲದೇ ತಮ್ಮ ಸಂಸ್ಥೆಗಳ ಖಾಲಿ ಹುದ್ದೆಗಳ ವಿವರ ಹಾಗೂ ಖಾಲಿ ಹುದ್ದೆಗಳ ಭರ್ತಿಗೆ ಮುನ್ನ ಆ ಹುದ್ದೆಗಳನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಅಧಿಸೂಚಿಸುವುದು ಕಡ್ಡಾಯವಾಗಿರುತ್ತದೆ.

ಎಲ್ಲಾ ನಿಯೋಜಕರು, ಸ್ಥಾಪನೆಗಳು, ಸಂಸ್ಥೆಗಳು ಕಾಯ್ದೆ ಹಾಗೂ ನಿಯಮಗಳನ್ವಯ ತಮ್ಮಲ್ಲಿರುವ ಉದ್ಯೋಗಿಗಳ ವಿವರಗಳು ಮತ್ತು ಖಾಲಿ ಹುದ್ದೆಗಳ ವಿವರಗಳನ್ನು ನಿಗದಿತ ನಮೂನೆ ಇ.ಆರ್-1 ರಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ :08192-259446 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top