ದಾವಣಗೆರೆ: ದೇವರಾಜ ಅರಸ್ ಬಡಾವಣೆ, ಎ ಬ್ಲಾಕ್‍ನಲ್ಲಿರುವ 2003 ರಲ್ಲಿ ನಿರ್ಮಾಣವಾದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಕಟ್ಟಡವನ್ನು ಸರ್ಕಾರಿ, ಅರೆ ಸರ್ಕಾರಿ, ಸಂಸ್ಥೆಗಳಿಗೆ ಹಾಗೂ ಬ್ಯಾಂಕ್ ಗಳಿಗೆ ಬಾಡಿಗೆ ನೀಡಲಾಗುತ್ತಿದೆ.
ವಿಶಾಲವಾದ ಜಾಗವನ್ನು ಹೊಂದಿದ್ದು ಕಟ್ಟಡದ ಸುತ್ತಲೂ ಕಾಂಪೌಂಡ್, ಬೋರ್‍ವೆಲ್ ಮತ್ತು ಕಛೇರಿಗೆ ಆಗಮಿಸುವ ಸಾರ್ವಜನಿಕರ ಹಾಗೂ ಸಿಬ್ಬಂದಿಗಳ ವಾಹನ ನಿಲುಗಡೆಗೆ ಸ್ಥಳಾವಕಾಶವಿದ್ದು, ಕಾಂಪೌಂಡ್ ಮುಂಭಾಗದಲ್ಲಿ 60 ಅಡಿ ಸಾರ್ವಜನಿಕ ರಸ್ತೆ ಹಾಗೂ ಕಛೇರಿಯ ಸುತ್ತಮುತ್ತ ಗಿಡಮರಗಳಿದ್ದು, ಉತ್ತಮ ಗಾಳಿ ಬೆಳಕು ಹೊಂದಿ ಕಟ್ಟಡವು ಸುಸಜ್ಜಿತವಗಿರುತ್ತದೆ.
ಆಸಕ್ತರು ಪ್ರಾದೇಶಿಕ ಅಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವರ ಮೊಬೈಲ್ ನಂ.9888861728 ಹಾಗೂ davangere@kspcb.gov.in ಸಂಪರ್ಕಿಸಲು ತಿಳಿಸಿದ್ದಾರೆ.



