ದಾವಣಗೆರೆ: ಜಿಲ್ಲೆಯ ವಿಶ್ವಕರ್ಮ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 40ನೇ ವರ್ಷದ ಸಾಮೂಹಿಕ ಉಪನಯನ ಮತ್ತು ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಮೇ 21ರಂದು ನಗರದ ಕಾಳಿಕಾದೇವಿ ರಸ್ತೆಯಲ್ಲಿನ ಶ್ರೀಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ವಿ.ಎಂ. ಕೊಟ್ರೇಶ ಆಚಾರ್ ಹೇಳಿದರು.
ಅಂದು ಬೆಳಗ್ಗೆ 11ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಅನಗೂಡಿನ ಅಂತರವಳ್ಳಿ ಶಾಖಾ ಮಠದ ಶ್ರೀ ಭಾಸ್ಕರ್ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಧ್ಯಕ್ಷತೆ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಸಾಪುರದ ಬಿ.ನಾಗೇಂದ್ರ ಚಾರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಮಹಾಪೌರ ವಿನಾಯಕ ಪೈಲ್ವಾನ್, ವರ್ತಕ ಬಿ.ಸಿ. ಉಮಾಪತಿ, ದಾವಣಗೆರೆ ಹರಿಹರ ಅರ್ಬನ್ ಸಹಕಾರ ಬ್ಯಾ೦ಕಿನ ಅಧ್ಯಕ್ಷ ಎನ್.ಮುರುಗೇಶ ಆಗಮಿಸುವರು ಎಂದುತಿಳಿಸಿದರು.
ಅತಿಥಿಗಳಾಗಿ ಬಿ.ಎಲ್.ಸೀತಾರಾಮ ಚಾರ್, ಬಿ.ವಿ.ಶಿವಾನಂದ, ಎನ್. ಪೂರ್ವಾ ಚಾರ್ಯ,
ಜಿ.ಪಿ.ಜಗನ್ನಾಥ, ರಾಕೇಶ್ ಜಾಧವ್, ಕೆ.ಪಿ.ಪರಮೇಶ್ವರಪ್ಪ, ಎಚ್.ಓ.ವಿರುಪಾ ಕಾಚಾರ್, ಅಖಂಡೇಶ್ವರಎಂ.ಪತ್ತಾರ, ಎಸ್.ರುದ್ರಾಚಾರ, ಎಸ್. ತಿಪ್ಪೇಸ್ವಾಮಿ,
ಶಾಂತಾಚಾರ್, ನಾಗರಾಜಚಾರ್, ಗುರು ಸಿದ್ದಚಾರ್, ವೀರಾಚಾರ್ ಪಾಲ್ಗೊಳ್ಳುವರು ಎಂದು ತಿಳಿಸಿದರು.