Connect with us

Dvgsuddi Kannada | online news portal | Kannada news online

ದಾವಣಗೆರೆ: ವಿವಿಧ ಕಡೆ ಜಪ್ತಿ ಮಾಡಿದ 178.63 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು

ದಾವಣಗೆರೆ

ದಾವಣಗೆರೆ: ವಿವಿಧ ಕಡೆ ಜಪ್ತಿ ಮಾಡಿದ 178.63 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು

ದಾವಣಗೆರೆ: ಜಿಲ್ಲೆಯ ಜಿಲ್ಲಾ ಗ್ರಾಮಾಂತರ ಪೋಲೀಸ್ ಠಾಣೆ ಹಾಗೂ ಹದಡಿ ಪೋಲೀಸ್ ಠಾಣೆಯ ಪೋಲೀಸ್ ಉಪ ನಿರೀಕ್ಷಕರು ಜಪ್ತಿ ಮಾಡಲಾದ 178.63 ಕ್ವಿಂಟಾಲ್ ಅಕ್ಕಿಯನ್ನು ಏಪ್ರಿಲ್ 6 ರಂದು ಬೆ. 10.30 ಕ್ಕೆ ಟಿ.ಎ.ಪಿ.ಸಿ.ಎಂ.ಎಸ್(ಲಿ) ಗ್ರಾಮಾಂತರ ಸಗಟು ಮಳಿಗೆ, ಎ.ಪಿ.ಎಂ.ಸಿ ಯಾರ್ಡ, ಡಿ-ಬ್ಲಾಕ್, ಎ.ಆರ್.ಸಿ ಗೋದಾಮು, ಎ.ಪಿ.ಎಂ.ಸಿ ಕಚೇರಿ ಹಿಂಭಾಗ ಬಹಿರಂಗ ಹರಾಜು ಮಾಡಲಾಗುತ್ತದೆ.

2022 ನವಂಬರ್ 21 ರಿಂದ 2023 ಜನವರಿ 20 ರವರೆಗೆ ದೇವರಹಟ್ಟಿ ಬಳಿ 145.75 ಕ್ವಿಂಟಾಲ್ ಅಕ್ಕಿ, ಹೂವಿನಮಡು ಗ್ರಾಮದಲ್ಲಿ 28.40 ಕ್ವಿಂಟಾಲ್ ಅಕ್ಕಿ , ಬುಳ್ಳಾಪುರ ಕ್ಯಾಂಪ್ ಬಳಿ 4.48 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿದ್ದು, ಬಹಿರಂಗ ಹರಾಜು ಮಾಡಲಾಗುತ್ತದೆ. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಹೆಚ್ಚಿನ ಮಾಹಿತಿಗಾಗಿ ಆಹಾರ ಶಿರಸ್ತೇದಾರ ಮೊ. ಸಂ. 9480065633 ಮತ್ತು ಆಹಾರ ನಿರೀಕ್ಷಕರ ಮೊ. ಸಂ. 7411462337, 8722433298, ಸಂಪರ್ಕಿಸಬಹುದೆಂದು ದಾವಣಗೆರೆ ತಾಲ್ಲೂಕು ತಹಶೀಲ್ದಾರರಾದ ಡಾ. ಎಂ.ಬಿ ಅಶ್ವಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top