ದಾವಣಗೆರೆ: ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಬಳಿಯ ರೈತ ಭನದ ಕಾಂಪೌಂಡ್ ಅನ್ನು ರಾತ್ರೊರಾತ್ರಿ ಏಕಾಏಕಿ ಧ್ವಂಸ ಮಾಡಿದ ಘಟನೆ ಜರುಗಿದೆ.
ರೈತ ಭವನವನ್ನು ಸದ್ಯ ದಾವಣಗೆರೆ ತಾಲ್ಲೂಕು ಕಚೇರಿಗೆ ನೀಡಲಾಗಿದ್ದು, ಭವನಕ್ಕೆ ಇದ್ದ ತಡೆಗೋಡೆ ಕೆಡವಲಾಗಿದೆ. ರಾತ್ರೋರಾತ್ರಿ ಸಿಸಿಬಿ ಯಂತ್ರದ ಮೂಲಕ ಕಾಂಪೌಂಡ್ ಧ್ವಂಸ ಮಾಡಿದ್ದಕ್ಕೆ ಸ್ಥಳಕ್ಕೆ ಆಗಮಿಸಿದ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜೆಸಿಬಿ ವಾಪಸ್ ಕಳುಹಿಸಿದ್ದಾರೆ.
ಇದೇ ವೇಳೆ ಎಪಿಎಂಸಿ ಕಾರ್ಯದರ್ಶಿಯ ವಿರುದ್ದ ರೈತರು ಘೋಷಣೆಗಳನ್ನು ಕೂಗಿದರು. ಇಲ್ಲಿನ ಮಾರುಕಟ್ಟೆಯ ಸ್ಥಳವನ್ನು ಮಾರಾಟ ಮಾಡುವ ಯತ್ನ ನಡೆಯುತ್ತಿದೆ ಎಂದು ದೂರಿದರು. ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಆಗಿರುವ ಸಮಸ್ಯೆ ಸರಿಪಡಿಸಬೇಕು ಎಂದು ಆಕ್ರೋಶ ಹೊರ ಹಾಕಿದರು. ಈ ವೇಳೆ ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ, ಚಿನ್ನಸಮುದ್ರ ಶೇಖರ ನಾಯ್ಕ್ ಎಪಿಎಂಸಿ ದಲಾಲರ ಸಂಘದ ಅಧ್ಯಕ್ಷ ಎಸ್ ಎನ ತಿಪ್ಪೇಸ್ವಾಮಿ ಹಾಗೂ ಖರೀದಿದಾರ ಸಂಘದ ಅಧ್ಯಕ್ಷ ಬಿ ದಾದಾಪೀರ್. ಕೆ ಬಿ ಸತೀಶ್ , ಎನ್ ಬಿಎ ಲೋಕೇಶ , ಎಸ್ ಎಂಟಿ ಮಲ್ಲೇಶ್, ಆರ್ ಎ ನವೀನ್ ಕುಮಾರ್ ಸೇರಿದಂತೆ ಮತ್ತಿತರಿದ್ದರು.