ದಾವಣಗೆರೆ: ದಾವಣಗೆರೆಯ ವೃತ್ತಿರಂಗಭೂಮಿ ರಂಗಾಯಣ ಸಂಸ್ಥೆಯು ವೃತ್ತಿರಂಗಭೂಮಿ ಶೈಲಿಯಲ್ಲಿ ಹೊಸ ನಾಟಕ ತಯಾರಿಸುತ್ತಿದೆ. ರಂಗ ನಟನೆ ಮತ್ತು ನೇಪಥ್ಯದಲ್ಲಿ ಆಸಕ್ತಿಯಿರುವ 18 ರಿಂದ 30 ವಯೋಮಿತಿಯ ಯುವಕ- ಯುವತಿಯರು ಫೆ.25 ರೊಳಗೆ ಅರ್ಜಿ ಸಲ್ಲಿಸಬಹುದು.
ಆಸಕ್ತರು ನಿರ್ದೇಶಕರು, ವೃತ್ತಿ ರಂಗಭೂಮಿ ರಂಗಾಯಣ, ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರ, ಎಂಸಿಸಿ ಬಿ ಬ್ಲಾಕ್, ಕುವೆಂಪು ನಗರ, ದಾವಣಗೆರೆ ಇವರಿಗೆ ಇತ್ತೀಚಿನ
ಎರಡು ವಿವಿಧ ಭಂಗಿಯ ಭಾವಚಿತ್ರ ಮತ್ತು ಸ್ವವಿವರದೊ೦ದಿಗೆ ಅರ್ಜಿ ಸಲ್ಲಿಸಬೇಕು. ರಂಗಭೂಮಿಯಲ್ಲಿ ಅನುಭವ, ನಾಟಕ ನಟನೆಯಲ್ಲಿ ಡಿಪ್ಲೋಮ, ಅಥವಾ ವೃತ್ತಿನಾಟಕ ಕಂಪನಿಗಳಲ್ಲಿ ದುಡಿದವರಿಗೆ ಆದ್ಯತೆ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ದೂ: 08192-200635 ಸಂಪರ್ಕಿಸಿ.