Connect with us

Dvgsuddi Kannada | online news portal | Kannada news online

ದಾವಣಗೆರೆ: SSLC, DIPLOMA, BE ವಿದ್ಯಾರ್ಥಿಗಳಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

Home

ದಾವಣಗೆರೆ: SSLC, DIPLOMA, BE ವಿದ್ಯಾರ್ಥಿಗಳಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ: ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಿಂದ 2021-22 ನೇ ಸಾಲಿಗೆ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ತಂತ್ರಜ್ಞಾನ ತರಬೇತಿಗಳ ಸಂಸ್ಥೆಗಳಿಗೆ ನೆರವು ಯೋಜನೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಮೂಲಕ ಉಚಿತವಾಗಿ ಕೆಳಕಂಡ ತರಬೇತಿಗಳನ್ನು ನೀಡಲಾಗುವುದು.

ಎಸ್.ಎಸ್.ಎಲ್.ಸಿ, ಐ.ಟಿ.ಐ, ಡಿಪ್ಲೋಮ, ಬಿ.ಇ ಪಾಸ್ ಆಗಿರುವ 16 ರಿಂದ 45 ವರ್ಷದೊಳಗಿನ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗಾಗಿ ಉದ್ಯೋಗಾವಕಾಶ ಕಲ್ಪಿಸಲು ಈ ತರಬೇತಿ ನೀಡಲಾಗುವುದು. ತರಬೇತಿ ಅವಧಿಗೆ ಶಿಷ್ಯವೇತನ ನೀಡಲಾಗುವುದು.
4 ತಿಂಗಳ ಅವಧಿಯ ತರಬೇತಿಗಳಾದ ಸಿಎನ್‍ಸಿ ಪ್ರೋಗ್ರಾಮರ್, ಕನ್ವೆನ್ಷನಲ್ ಟರ್ನಿಂಗ್ ಮಷೀನ್ ಆಪರೇಟರ್, ಕನ್ವೆನ್ಷನಲ್ ಮಿಲ್ಲಿಂಗ್ ಮಷೀನ್ ಆಪರೇಟರ್, ಕನ್ವೆನ್ಷನಲ್ ಸರ್ಫೇಸ್ ಗ್ರೈಡಿಂಗ್ ಮಷಿನ್ ಆಪರೇಟರ್, ಡಿಸೈನರ್-ಮೆಕ್ಯಾನಿಕಲ್, ಪ್ರೊಡಕ್ಷನ್ ಇಂಜಿನಿಯರ್, ಡೊಮೆಸ್ಟಿಕ್ ಡಾಟಾ ಎಂಟ್ರಿ ಅಪರೇಟರ್ ಹಾಗೂ ಯೂನಿಗ್ರಾಫಿಕ್ಸ್(ಯುಜಿ) ಹಾಗೂ 12 ತಿಂಗಳ ಅವಧಿಯ ತರಬೇತಿ ಟೂಲ್ ರೂಂ ಮಷಿನಿಸ್ಟ್. ತರಬೇತಿ ಕಾರ್ಯಕ್ರಮವನ್ನು ಉಚಿತವಾಗಿ ನಡೆಸಲಾಗುವುದು.

ಎಸ್.ಎಸ್.ಎಲ್.ಸಿ ಅಂಕಪಟ್ಟಿ, ವಿದ್ಯಾಭ್ಯಾಸ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಭಾವಚಿತ್ರ ಇವುಗಳ ನಕಲು ಪ್ರತಿಯೊಂದಿಗೆ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ. ತರಬೇತಿ ಮುಗಿದ ನಂತರ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು. ಅರ್ಜಿಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಜಿ.ಟಿ.ಟಿ.ಸಿ 22 ಸಿ & ಡಿ , ಕೆ.ಐ.ಎ.ಡಿ.ಬಿ, ಇಂಡಸ್ಟ್ರಿಯಲ್ ಏರಿಯಾ ಹರ್ಲಾಪುರ, ಕೆ.ಎಸ್.ಆರ್.ಟಿ.ಸಿ ಡಿಪೋ ಹತ್ತಿರ ಹರಿಹರ, ದೂರವಾಣಿ ಸಂಖ್ಯೆ: 08192-243937, 7019600676, 8711913947, 8884488202 ಸಂರ್ಪಕಿಸಬಹುದೆಂದು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in Home

  • Home

    ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024

    By

    ಈ ರಾಶಿಯವರು ಸಿಹಿ ಸಂದೇಶಗಳ ಮೇಲೆ ಸಿಹಿ ಸಂದೇಶ ಪಡೆಯಲಿದ್ದೀರಿ, ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024 ಸೂರ್ಯೋದಯ: 06:29, ಸೂರ್ಯಾಸ್ತ :...

  • Home

    ಗುರುವಾರ- ರಾಶಿ ಭವಿಷ್ಯ ಜನವರಿ-4,2024

    By

    ಈ ರಾಶಿಗಳ ಕಿರುತೆರೆಯ ನಟ-ನಟಿಯರಿಗೆ, ಹಿನ್ನೆಲೆ ಗಾಯಕರಿಗೆ, ಸಂಗೀತಗಾರರಿಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ಬೆಳ್ಳಿತೆರೆಯಲ್ಲಿ ಸಾಕಷ್ಟು ಅವಕಾಶಗಳು ಸಿಗಲಿವೆ. ಗುರುವಾರ- ರಾಶಿ ಭವಿಷ್ಯ...

  • Home

    ಮರದ ಬಾಗಿಣ ವಿಶೇಷತೆ..!

    By

    ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು. ಸೋಮಶೇಖರ ಗುರೂಜಿB.Sc ಜ್ಯೋತಿಷ್ಯರು, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.MOB.93534 88403 ೧....

  • Home

    ಬುಧವಾರ- ರಾಶಿ ಭವಿಷ್ಯ ನವೆಂಬರ್-29,2023

    By

    ಈ ರಾಶಿಯವರಿಗೆ ಬಂಧುಗಳ ಅವಹೇಳನ ಮಾತುಗಳಿಂದ ಪ್ರಗತಿಗೆ ದಾರಿದೀಪ, ಈ ರಾಶಿಯವರಿಗೆ ಒತ್ತಡದ ಮೇರೆಗೆ ಹಣ ಸ್ವೀಕಾರ, ಈ ರಾಶಿಯವರು ಚಿನ್ನಾಭರಣ...

  • Home

    ಬುಧವಾರ- ರಾಶಿ ಭವಿಷ್ಯ ನವೆಂಬರ್-22,2023

    By

    ಈ ಪಂಚ ರಾಶಿಗಳ ತುಳಸಿ ಪೂಜೆ ನಂತರ ವಿವಾಹ ಕಾರ್ಯ ನೆರವೇರುವುದು, ರಿಯಲ್ ಎಸ್ಟೇಟ್ ಉದ್ಯಮದಾರರು ಬಹು ಮುಖ್ಯವಾದ ಪ್ರಾಜೆಕ್ಟ್ ಗೆ...

To Top